ಜಿಲ್ಲೆ

ಬಿಜೆಪಿ ತೆಕ್ಕೆಗೆ ಹಾವೇರಿ ನಗರಸಭೆ ಆಡಳಿತ ಚುಕ್ಕಾಣಿ; ಬಹುಮತವಿದ್ದರೂ ಕಾಂಗ್ರೆಸ್ ಗೆ ತೀವ್ರ ಮುಖಭಂಗ

ಹಾವೇರಿ: ಬಿಜೆಪಿ ತೆಕ್ಕೆಗೆ ಹಾವೇರಿ ನಗರಸಭೆ ಆಡಳಿತ ಚುಕ್ಕಾಣಿ. ಬಹುಮತವಿದ್ದರೂ ಕಾಂಗ್ರೆಸ್ ಗೆ ತೀವ್ರ ಮುಖಭಂಗ.

ಚುನಾವಣೆಗೆ ಗೈರಾದ ಕಾಂಗ್ರೆಸ್ ನ ಆರು ಸದಸ್ಯರು. ಪಕ್ಷೇತರರ ಸಹಕಾರದಿಂದ ಅಧಿಕಾರದ ಗದ್ದುಗೆ ಏರಿದ ಬಿಜೆಪಿ. ಬೊಮ್ಮಾಯಿ‌ ತಂತ್ರಕ್ಕೆ ಯಶಸ್ಸು ದೊರೆಯಿತು.

ಬಿಜೆಪಿ ಬೆಂಬಲಿತ ಪಕ್ಷೇತರ ಅಭ್ಯರ್ಥಿಗಳಾದ ಶಶಿಕಲಾ ರಾಮು ಮಾಳಗಿ ನೂತನ ಅಧ್ಯಕ್ಷೆಯಾಗಿ, ಮಲ್ಲಿಕಾರ್ಜುನ ಸಾತೇನಹಳ್ಳಿ ಉಪಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದರು.

ಪಕ್ಷೇತರ ಅಭ್ಯರ್ಥಿಗಳಿಗೆ ಸಹಕಾರ ನೀಡಿ,ರೆಸಾರ್ಟ್ ರಾಜಕೀಯದಿಂದ ಕಾಂಗ್ರೆಸ್ ಸೋಲಿಸಿದ ಬಿಜೆಪಿ

ಕಾಂಗ್ರೆಸ್ ನ 6 ಮಂದಿ ಸದಸ್ಯರಿಗೆ ಗಾಳ ಹಾಕಿದ್ದ ಬಿಜೆಪಿ ಹಾಗೂ ಪಕ್ಷೇತರರ ಟೀಂ

ಒಟ್ಟು 31 ಸದಸ್ಯ ಬಲಾಬಲದ ನಗರಸಭೆಯಲ್ಲಿ ಕಾಂಗ್ರೇಸ್-15, ಬಿಜೆಪಿ-9, ಪಕ್ಷೇತರರು- 7 ಆಯ್ಕೆಯಾಗಿದ್ದ ಸದಸ್ಯರು

ಪಕ್ಷೇತರ ಅಭ್ಯರ್ಥಿ ಶಶಿಕಲಾ ಮಾಳಗಿ 16 ಓಟು ಪಡೆದು ನೂತನ ನಗರಸಭೆ ಅಧ್ಯಕ್ಷರಾಗಿ ಆಯ್ಕೆ

ಪಕ್ಷೇತರ ಸದಸ್ಯರಾದ ಮಲ್ಲಿಕಾರ್ಜುನ ಸಾತೇನಹಳ್ಳಿ ಉಪಾಧ್ಯಕ್ಷರಾಗಿ ಅಯ್ಕೆ