ಜಿಲ್ಲೆ

ಬಸ್ ದರ ಏರಿಕೆ ಪುನರ್ ಪರಿಶೀಲಿಸಿ; ರಾಜ್ಯ ಸರ್ಕಾರಕ್ಕೆ ಎಂ.ಎಸ್.ಕೋರಿಶೆಟ್ಟರ್ ಒತ್ತಾಯ

ಕೇಶವಮೂರ್ತಿ ಬೇಲೂರಪ್ಪನವರ

ಹಾವೇರಿ: ಸಾರಿಗೆ ಬಸ್ ದರ ಏರಿಕೆ ನಿರ್ಧಾರ ಖಂಡನೀಯ. ಶಕ್ತಿ ಯೋಜನೆಯಂಥ ಜನಪ್ರಿಯ ಯೋಜನೆಗಳನ್ನು ಇನ್ನುಮುಂದೆ ರಾಜ್ಯ ಸರ್ಕಾರ ಘೋಷಿಸಬಾರದು. ಇದರಿಂದ ಆರ್ಥಿಕ ಹೊರೆಯಾಗಲಿದೆ. ಉಚಿತ ಯೋಜನೆಗಳ ಬದಲಾಗಿ ಶೇ.50ರಷ್ಟು ರಿಯಾಯ್ತಿ ನೀಡಬೇಕು ಎಂದು ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಎಂ.ಎಸ್.ಕೋರಿಶೆಟ್ಟರ್ ಒತ್ತಾಯಿಸಿದ್ದಾರೆ.

ಇಂತಹ ಯೋಜನೆಗಳಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತದೆ. ಸಚಿವ ಸಂಪುಟ ಸಭೆಯಲ್ಲಿ ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಸಾರಿಗೆ ದರವನ್ನು ಏಕಾಏಕಿ ಶೇ.15ರಷ್ಟು ಹೆಚ್ಚು ಮಾಡಲು ನಿರ್ಧರಿಸಿದ್ದರಿಂದ ಸಾರ್ವಜನಿಕರಿಗೆ ಹೊರೆ ಆಗಲಿದೆ. ಈ ಬಗ್ಗೆ ಸರ್ಕಾರ ಪುನರ್ ಪರಿಶೀಲನೆ ಮಾಡಬೇಕು. ಏರಿಕೆ ನಿರ್ಧಾರ ಕೈಬಿಡಬೇಕು ಎಂದು ಎಂ.ಎಸ್.ಕೋರಿಶೆಟ್ಟರ್ ಪ್ರಕಟಣೆ ಮೂಲಕ ಒತ್ತಾಯಿಸಿದ್ದಾರೆ.