ಜಿಲ್ಲೆ

ಹಾವೇರಿಯಲ್ಲಿ ಮೊಹರಂ ಆಚರಣೆ ಜು.18ರಂದು

ಹಾವೇರಿ: ನಗರದಲ್ಲಿ ಜು.18ರಂದು ಮೊಹರಂ ಆಚರಿಸಲಾಗುತ್ತದೆ. ಸುಭಾಷ ವೃತ್ತದಲ್ಲಿ ಸಂಜೆ 5 ಗಂಟೆಗೆ ಎಲ್ಲ ಮೆರವಣಿಗೆಗಳು ಒಂದೆಡೆ ಸೇರಲಿವೆ.
ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಬುಧವಾರವೇ ಮೊಹರಂ ಆಚರಿಸಿದ್ದರೆ, ಹಾವೇರಿ ನಗರದಲ್ಲಿ ಮಾತ್ರ ಎಂದಿನಂತೆ ಮರುದಿನವೇ ವಿಶೇಷವಾಗಿ ಹಬ್ಬ ಆಚರಿಸಲಾಗುತ್ತದೆ.

ನಗರದ ವಿವಿಧ ಬಡಾವಣೆಗಳಲ್ಲಿ ಸ್ಥಾಪಿಸಿರುವ ಪಾಂಜಾಗಳನ್ನು ಮೆರವಣಿಗೆ ಮೂಲಕ ತರಲಾಗುತ್ತದೆ. ಮಧ್ಯಾಹ್ನ ಆರಂಭವಾಗುವ ಮೆರವಣಿಗೆ ಸಂಜೆ ವೇಳೆಗೆ ಸುಭಾಷ ವೃತ್ತ ತಲುಪಲಿದೆ. ನಂತರ ಮಕಾನ ಗಲ್ಲಿ ಮಾರ್ಗವಾಗಿ ಅಕ್ಕಮಹಾದೇವಿ ಹೊಂಡಕ್ಕೆ ತೆರಳಿ ದೇವರಿಗೆ ಸ್ನಾನ ಮಾಡಿಸಲಾಗುತ್ತದೆ. ನಂತರ ಮೂಲಕ ಸ್ಥಾನಕ್ಕೆ ತೆರಳುವ ಮೂಲಕ ಹಬ್ಬ ಸಮಾಪ್ತಿಯಾಗಲಿದೆ ಎಂದು ಹಾವೇರಿ ಅಂಜುಮನ್ ಸಂಸ್ಥೆಯ ಅಧ್ಯಕ್ಷ ಇರ್ಫಾನ್‌ಖಾನ್ ಪಠಾಣ ತಿಳಿಸಿದ್ದಾರೆ.