ಜಿಲ್ಲೆ

ಶಾಸಕರ ಮನೆ ಬಳಿ 33 ಲಕ್ಷ ರೂ. ಕಳವು; ಎಂಎಲ್‌ಎ ಆಪ್ತನ ಕಾರಿನ ಗಾಜು ಒಡೆದು ಕೃತ್ಯ

ಹಾವೇರಿ: ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣನವರ ಅವರ ಬಸವೇಶ್ವರ ನಗರದ ಮನೆಯ ಬಳಿ ಅವರ ಆಪ್ತರೊಬ್ಬರ ಕಾರಿನ ಗಾಜು ಒಡೆದು 33 ಲಕ್ಷ ರೂ. ನಗದು ಕದ್ದು ಪರಾರಿಯಾದ ಘಟನೆ ಗುರುವಾರ ನಡೆದಿದೆ.

ಉದ್ಯಮಿ ಸಂತೋಷ ಹಿರೇಮಠ ಎಂಬುವರಿಗೆ ಸೇರಿದ ಹಣ ಕಳ್ಳತನವಾಗಿದೆ.

ಸಂತೋಷ ಅವರು ಕಿಯಾ ಕಾರಿನ ಸೀಟಿನ ಕೆಳಗೆ 33 ಲಕ್ಷ ರೂ. ಹಣ ಇಟ್ಟು, ಮನೆಯ ಒಳಗೆ ಹೋಗಿದ್ದರು. ಈ ವೇಳೆ ಕಳ್ಳರು ಕಾರಿನ ಗಾಜು ಒಡೆದು ಹಣ ಕದ್ದು ಪರಾರಿಯಾಗಿದ್ದಾರೆ. ಸ್ಥಳಕ್ಕೆ ಹಾವೇರಿ ಶಹರ ಠಾಣೆ ಇನ್‌ಸ್ಪೆಕ್ಟರ್ ಮೋತಿಲಾಲ ಪವಾರ ಹಾಗೂ ಸಿಬ್ಬಂದಿ ಭೇಟಿ ನೀಡಿ, ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸ್ಥಳೀಯ ಸಿಸಿಟಿವಿ ಕ್ಯಾಮರಾ ಪರಿಶೀಲಿಸಿ, ಕಳ್ಳರ ಪತ್ತೆಗೆ ಬಲೆ ಬೀಸಿದ್ದಾರೆ.