ಜಿಲ್ಲೆ

ಜಾತಿ ಗಣತಿ ಕುರಿತು ಕ್ಯಾಬಿನೇಟ್‌ನಲ್ಲಿ ನಿರ್ಧಾರ; ಸಚಿವ ಶಿವಾನಂದ ಪಾಟೀಲ

ಕೇಶವಮೂರ್ತಿ ಬೇಲೂರಪ್ಪನವರ

ಹಾವೇರಿ: ಜಾತಿ ವಿಷಯದಲ್ಲಿ ರಾಜಕಾರಣ ಮಾಡುವುದರಲ್ಲಿ ಅರ್ಥವಿಲ್ಲ. ರಾಜ್ಯ ಸರ್ಕಾರದಿಂದ ಜಾತಿಗಣತಿ ಅನುಷ್ಠಾನಗೊಳಿಸುವ ವಿಚಾರದ ಕುರಿತು ಮುಖ್ಯಮಂತ್ರಿಯವರು ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಿದ್ದಾರೆ ಎಂದು ಸಚಿವ ಶಿವಾನಂದ ಪಾಟೀಲ ಪ್ರತಿಕ್ರಿಯಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದವರಿಗೆ ಆದ್ಯತೆ ಕೊಡಬೇಕು. ಜನ ಯಾರೂ ಅಂಗೀಕಾರ ಮಾಡಲಿ ಅಂತ ಒತ್ತಾಯ ಮಾಡಿಲ್ಲ. ಕ್ಯಾಬಿನೇಟ್‌ನಲ್ಲಿ ಎಲ್ಲ ವಿಚಾರ ಚರ್ಚಿಸಿ, ನಿರ್ಣಯ ಮಾಡಬೇಕಾಗುತ್ತದೆ. ಪುನರ್ ವಿಮರ್ಶೆ ಮಾಡಬಹುದು ಅಥವಾ ಮಾಡದೇ ಇರಬಹುದು. ಒಂದು ಸಮಾಜದ ಪರ ಅಥವಾ ಒಂದು ಸಮಾಜ ವಿರೋಧ ಮಾಡುವಂತದ್ದಲ್ಲ. ಎಲ್ಲರ ವಿಚಾರಗಳನ್ನು ಒಳಗೊಂಡು ರಾಜ್ಯ ನಡೆಸಬೇಕಾಗಿದೆ. ಅದರ ಜವಾಬ್ದಾರಿ ಮುಖ್ಯಮಂತ್ರಿಗಳದ್ದು ಆಗಿರುತ್ತದೆ. ಭವಿಷ್ಯದಲ್ಲಿ ಮುಂದೆ ಏನು ಆಗುತ್ತದೆ ಕಾದು ನೋಡೋಣ ಎಂದರು.