ಹಾವೇರಿ: ದೇಶದಲ್ಲಿ ಕಬ್ಬು ಅರೆಯುವಲ್ಲಿ ರಾಜ್ಯಕ್ಕೆ ಮೂರನೇ ಸ್ಥಾನವಿದೆ. ಒಟ್ಟು 81 ಶುಗರ್ ಫ್ಯಾಕ್ಟರಿಗಳಿದ್ದು, ಮೊದಲು ಆರು ತಿಂಗಳು ಫ್ಯಾಕ್ಟರಿಗಳು ಕಾರ್ಯನಿರ್ವಹಿಸುತ್ತಿದ್ದವು. ಈಗ ಮೂರು ತಿಂಗಳಲ್ಲಿ ಕಬ್ಬು ಖಾಲಿಯಾಗುತ್ತದೆ. ಶುಗರ್ ಫ್ಯಾಕ್ಟರಿಗಳಲ್ಲಿ ನಿಯಮಕ್ಕಿಂತ ಹೆಚ್ಚಿನ ವೇಸ್ಟೇಜ್ ಕಟಾವು ಮಾಡುತ್ತಿದ್ದರೆ, ಸಂಬಂಧಪಟ್ಟ ರೈತರು ದೂರು ನೀರಿದರೆ ಅವರಿಗೆ 5 ಲಕ್ಷ ರೂ. ಬಹುಮಾನ ನೀಡಲಾಗುವುದು. ನಿಯಮ ಉಲ್ಲಂಘಿಸಿದ ಕಾರ್ಖಾನೆಯ ಲೈಸನ್ಸ್ ರದ್ದು ಮಾಡಲಾಗುವುದು ಎಂದು ಸಚಿವ ಶಿವಾನಂದ ಪಾಟೀಲ ತಿಳಿಸಿದರು.