ಜಿಲ್ಲೆ

ಕೆಡಿಪಿ ತ್ರೈಮಾಸಿಕ‌ ಸಭೆಯಲ್ಲಿ "ವಿಜಯವಾಣಿ" ವರದಿಗಳ ಮಾರ್ಧನಿ; ತನಿಖೆ ಮಾಡಿ, ಅಕ್ರಮ ದಂಧೆಗೆ ಕಡಿವಾಣ ಹಾಕಲು ಸಚಿವ ಶಿವಾನಂದ ಪಾಟೀಲ ಸೂಚನೆ

ಹಾವೇರಿ: ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ 'ವಿಜಯವಾಣಿ' ವರದಿಗಳ ಮೇಲೆ ಸಚಿವರು ಚರ್ಚೆ ನಡೆಸಿ, ತನಿಖೆಗೆ ಆದೇಶಿಸಿದರು.

ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳ ವಿರುದ್ಧ ಸಚಿವರು ಗರಂ

ಅಕ್ರಮ ಗಣಿಗಾರಿಕೆ ಮರಳು ದಂಧೆ ಮತ್ತು ಅರಣ್ಯ ಒತ್ತುವರಿ, ಇಸ್ಪೀಟ್, ಮಟಕಾ ಜೂಜಾಟದ ಬಗ್ಗೆ 'ವಿಜಯವಾಣಿ' ಪತ್ರಿಕೆಯಲ್ಲಿ ಬಂದಿದೆ. ಈ ಬಗ್ಗೆ ಏನು ಕ್ರಮ ತೆಗೆದುಕೊಂಡಿದ್ದೀರಿ.

ಅಕ್ರಮ ಗಣಿಗಾರಿಕೆಯಲ್ಲಿ ಪಿಎಸ್ಐ, ಸಿಪಿಐಗಳು ಶಾಮೀಲಾಗಿದ್ದಾರೆ ಎಂಬ ಮಾಹಿತಿ ಇದೆ. ಅಂತಹವರನ್ನು ತಕ್ಷಣ ಅಮಾನತು ಮಾಡಿ.

ನಿಮಗೆ ದೂರು ಬಂದ ಮೇಲೆಯೇ ಕ್ರಮ ಕೈಗೊಳ್ಳುವುದು ಬೇಡ.

ನಿಮಗೆ ವಿಜಿಲೆನ್ಸ್ ಇರುತ್ತದೆ, ಅದರ ಆಧಾರದ ಮೇಲೆ ಕ್ರಮ ಕೈಗೊಳ್ಳಿ.

ನಿಮ್ಮ ಹೆಚ್ಚುವರಿ ಎಸ್ಪಿಯವರು ಏನು ಮಾಡುತ್ತಿದ್ದಾರೆ. ಕೂಡಲೇ ಅಕ್ರಮ ದಂಧೆ ನಿಲ್ಲಬೇಕು.

ತಪ್ಪಿತಸ್ಥ ಪಿಎಸ್ಐ ಮತ್ತು ಸಿಪಿಐಗಳ ಮೇಲೆ ಕ್ರಮ ಆಗಬೇಕು. ಅರಷ್ಯ ಒತ್ತುವರಿ ನಿಲ್ಲಬೇಕು. ಡಿಸಿಣ ಎಸ್ ಪಿ ಗಮನ ಹರಿಸಬೇಕು. ಕಠಿಣ ನಿರ್ಧಾರ ತೆಗೆದುಕೊಂಡು ಸರ್ಕಾರದ ಮರ್ಯಾದೆ ಉಳಿಸಬೇಕು ಎಂದು ಸೂಚಿಸಿದರು.

ಜಿಲ್ಲೆಯ ಶಾಸಕರು, ಡಿಸಿ ವಿಜಯ ಮಹಾಂತೇಶ ದಾನಮ್ಮನವರ, ಜಿಪಂ ಸಿಇಒ ಅಕ್ಷಯ ಶ್ರೀಧರ, ಎಸ್ ಪಿ ಅಂಶುಕುಮಾರ, ಸೇರಿದಂತೆ ಜಿಲ್ಲೆಯ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿರಿದ್ದರು.