ಜಿಲ್ಲೆ

ಡಿನ್ನರ್ ಪಾಲಿಟಿಕ್ಸ್, ಗಮನ ಬೇರೆಡೆ ಸೆಳೆಯುವ ಯತ್ನ; ಮಾಜಿ ಸಚಿವ ಬಿ.ಸಿ.ಪಾಟೀಲ ಲೇವಡಿ

ಕೇಶವಮೂರ್ತಿ ಬೇಲೂರಪ್ಪನವರ

ಹಾವೇರಿ: ರಾಜ್ಯದ ಸಚಿವರ ಜತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಡಿನ್ನರ್ ಮೀಟಿಂಗ್ ಕರೆದಿರುವುದು ಜನರ ಗಮನವನ್ನು ಬೇರೆಡೆಗೆ ಸೆಳೆಯುವ ಯತ್ನ ಎಂದು ಮಾಜಿ ಸಚಿವ ಬಿ.ಸಿ.ಪಾಟೀಲ ಲೇವಡಿ ಮಾಡಿದರು.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪವರ್ ಶೇರಿಂಗ್ ನಮಗೆ ಸಂಬಂಧವಿಲ್ಲದ ವಿಚಾರ. ನವೆಂಬರ್, ಕ್ರಾಂತಿ, ಸೆಪ್ಟೆಂಬರ್ ಕ್ರಾಂತಿ ಜನರಿಗೆ ಬೇಕಿಲ್ಲ. ಅಭಿವೃದ್ಧಿ ಬೇಕಿದೆ. ಅದನ್ನು ಬಿಟ್ಟು ಈ ಸರ್ಕಾರ ಬೇರೆಲ್ಲವನ್ನೂ ಮಾಡುತ್ತಿದೆ. ಇದೊಂದು ಅಭಿವೃದ್ಧಿ ಶೂನ್ಯ ಸರ್ಕಾರವಾಗಿದೆ. ರಾಜ್ಯದ ಜನ ಛೀಮಾರಿ ಹಾಕುತ್ತಿದ್ದಾರೆ. ಜನರಿಗೆ ಕಾಂಗ್ರೆಸ್ ಸರ್ಕಾರದ ಆಡಳಿತದ ಬಗ್ಗೆ ಸರಿಯಾಗಿ ಅರ್ಥವಾಗಿದೆ. ಸಮಯ ಬಂದಾಗ ಜನರು ತಕ್ಕ ಪಾಠ ಕಲಿಸುತ್ತಾರೆ ಎಂದರು.