ಜಿಲ್ಲೆ

ಫುಟ್‌ಪಾತ್ ಮೇಲೆ ವ್ಯಾಪಾರ ಮಾಡದಂತೆ ಎಚ್ಚರಿಕೆ; ಹಾವೇರಿ ಎಂಜಿ ರಸ್ತೆ ಪಾರ್ಕಿಂಗ್ ವ್ಯವಸ್ಥೆ ಪರಿಶೀಲಿಸಿದ ಎಎಸ್‌ಪಿ, ನಗರಸಭೆ ಅಧ್ಯಕ್ಷೆ

ಕೇಶವಮೂರ್ತಿ ಬೇಲೂರಪ್ಪನವರ

ಹಾವೇರಿ: ನಗರದ ಎಂಜಿ ರಸ್ತೆಯಲ್ಲಿ ಸೋಮವಾರ ನಗರಸಭೆ ಹಾಗೂ ಪೊಲೀಸ್ ಇಲಾಖೆಯಿಂದ ಫುಟ್‌ಪಾತ್ ಅತಿಕ್ರಮಣ ಮಾಡಿಕೊಂಡು ವ್ಯಾಪಾರ ಮಾಡದಂತೆ ಎಚ್ಚರಿಕೆ ನೀಡಲಾಯಿತು.

ಹೆಚ್ಚುವರಿ ಎಸ್‌ಪಿ ಎಲ್.ವೈ.ಶಿರಕೋಳ ಹಾಗೂ ನಗರಸಭೆ ಅಧ್ಯಕ್ಷೆ ಶಶಿಕಲಾ ಮಾಳಗಿ ಜಂಟಿಯಾಗಿ ಎಂಜಿ ರಸ್ತೆಯಲ್ಲಿ ಪರಿಶೀಲನೆ ನಡೆಸಿದರು. ಬೀದಿಬದಿ ವ್ಯಾಪಾರಿಗಳು ಫುಟ್‌ಪಾತ್ ಅತಿಕ್ರಮಿಸಿ ಹಾಗೂ ರಸ್ತೆ ಮೇಲೆ ವ್ಯಾಪಾರ ಮಾಡದಂತೆ ಸೂಚಿಸಿದರು. ಅಂಗಡಿಕಾರರು ತಮ್ಮ ವಸ್ತುಗಳನ್ನು ರಸ್ತೆ ಹಾಗೂ ಫುಟ್‌ಪಾತ್ ಮೇಲೆ ಇಟ್ಟು ವ್ಯಾಪಾರ ಮಾಡದಂತೆ ಎಚ್ಚರಿಕೆ ನೀಡಿದರು. ಪಾರ್ಕಿಂಗ್ ಸ್ಥಳದಲ್ಲಿ ಮಾತ್ರ ಪಾರ್ಕಿಂಗ್ ಮಾಡುವಂತೆ ವಾಹನ ಸವಾರರಿಗೆ ಎಚ್ಚರಿಕೆ ನೀಡಿದರು.

ಸಂಚಾರ ಠಾಣೆ ಪಿಎಸ್‌ಐ ಪ್ರಕಾಶ ಕಾಟೆ, ಎಇಇ ಎನ್.ಆರ್.ರಾಯ್ಕರ, ಇತರರಿದ್ದರು.

ಬೆಳಗ್ಗೆ 9ರ ನಂತರ ಅನ್ ಲೋಡಿಂಗ್

ಎಂಜಿ ರಸ್ತೆಯಲ್ಲಿ ವ್ಯಾಪಾರಿಗಳು ಬೆಳಗ್ಗೆ 9ರ ನಂತರ ರಸ್ತಬದಿ ಲಾರಿ, ಮಿನಿ ಟ್ರಕ್ ನಿಲ್ಲಿಸಿ ಲೋಡಿಂಗ್, ಅನ್ ಲೋಡಿಂಗ್ ಮಾಡದಂತೆ ಕ್ರಮ ಜರುಗಿಸಲಾಗುವುದು. ಈ ಕುರಿತು ಶಾಸಕ ರುದ್ರಪ್ಪ ಲಮಾಣಿ ಅವರೊಂದಿಗೆ ಚರ್ಚಿಸಲಾಗಿದ್ದು, ಶೀಘ್ರದಲ್ಲೇ ಕ್ರಮ ಜರುಗಿಸಲಾಗುವುದು ಎಂದು ಎಎಸ್‌ಪಿ ಎಲ್.ವೈ.ಶಿರಕೋಳ ತಿಳಿಸಿದ್ದಾರೆ.