ಜಿಲ್ಲೆ

25ನೇ ವಾರ್ಷಿಕ ಮಹಾಸಭೆ 21ರಂದು

ಹಾವೇರಿ: ಶ್ರೀ ಮಾಹೇಶ್ವರ ಕ್ರೆಡಿಟ್ ಕೋ-ಆಪ್ ಸೊಸೈಟಿಯ 25ನೇ ವಾರ್ಷಿಕ ಮಹಾಸಭೆ, ಪ್ರತಿಭಾ ಪುರಸ್ಕಾರ ಮತ್ತು ಪದವಿ ಪ್ರಧಾನ ಸಮಾರಂಭ ಸೆ.21ರಂದು ಮಧ್ಯಾಹ್ನ 3 ಗಂಟೆಗೆ ಅಕ್ಕಿಪೇಟೆಯ ಸಂಘದ ಕಚೇರಿಯಲ್ಲಿ ಜರುಗಲಿದೆ.
ಬಾಳೆಹೊನ್ನೂರು ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಸಾನ್ನಿಧ್ಯ ವಹಿಸುವರು. ಸಂಸ್ಥೆಯ ಆಯ್ದ ಸದಸ್ಯರಿಗೆ ಹಿರಿಯ ನಾಗರಿಕ, ಉತ್ತಮ ಗ್ರಾಹಕ ಹಾಗೂ ವೀರಶೈವ ಧಾರ್ಮಿಕ ಸಂಸ್ಕಾರದಲ್ಲಿ ಪ್ರತಿಭೆ ತೋರಿದ ಸಿಂದಗಿ ಮಠದ ವಟುವಿಗೆ ಪುರಸ್ಕಾರ ನೀಡಲಾಗುವುದು. ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು ಎಂದು ಸೊಸೈಟಿ ಸಿಇಒ ಚಂದ್ರಶೇಖರಯ್ಯ ಮಠದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.