ಜಿಲ್ಲೆ

ಬೆಳ್ಳಂಬೆಳಗ್ಗೆ ಲೋಕಾಯುಕ್ತ ದಾಳಿ, ಲೋಕಾಯುಕ್ತ ಪೊಲೀಸರ ಒಂಭತ್ತು ತಂಡಗಳಿಂದ ಜಿಲ್ಲೆಯ ವಿವಿಧೆಡೆ ದಾಳಿ; ಭಾರಿ ಪ್ರಮಾಣದ ಆಸ್ತಿ ದಾಖಲೆ ವಶಕ್ಕೆ

ಹಾವೇರಿ: ಬೆಳ್ಳಂಬೆಳಗ್ಗೆ ಲೋಕಾಯುಕ್ತ ದಾಳಿ, ಲೋಕಾಯುಕ್ತ ಪೊಲೀಸರ ಒಂಭತ್ತು ತಂಡಗಳಿಂದ ಜಿಲ್ಲೆಯ ವಿವಿಧೆಡೆ ದಾಳಿ

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎಇ ಕಾಶೀನಾಥ ಭಜಂತ್ರಿ, ಮಹಿಳಾ‌ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಶ್ರೀನಿವಾಸ ಆಲದಾರ್ತಿ ಹಾಗೂ ರಾಣೆಬೆನ್ನೂರ ಸಿಡಿಪಿಒ ಕಚೇರಿ ಮೇಲ್ವಿಚಾರಕಿ ಜ್ಯೋತಿ ಶಿಗ್ಲಿ ಮನೆ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ.

ಗ್ರಾಮೀಣ ಕುಡಿಯುವ ನೀರು ಇಲಾಖೆಯ ಕಾಶೀನಾಥ ಭಜಂತ್ರಿಯ ಹಿರೇಕೆರೂರ ಉಪ ವಿಭಾಗದ ಕಚೇರಿ, ಹಾವೇರಿ‌ನಗರದ ಏಳು ಮನೆಗಳು, ಮುಂಡಗೋಡದ ಫಾಮ್೯ ಹೌಸ್ ಮೇಲೆ ದಾಳಿ‌ ನಡೆಸಿರುವ ಲೋಕಾ ತಂಡ ಭಾರಿ ಪ್ರಮಾಣದ ಆಸ್ತಿ ಪತ್ರಗಳು, ದಾಖಲೆಗಳನ್ನು ವಶಕ್ಕೆ ಪಡೆದು ಪರಿಶೀಲಿಸುತ್ತಿದೆ.

ಮಹಿಳಾ ಮಕ್ಕಳ ಕಲ್ಯಾಣ ಇಲಾಖೆಯ ಡಿಡಿ ಶ್ರೀನಿವಾಸ ಆಲದಾರ್ತಿಯ ರಾಣೆಬೆನ್ನೂರ ನಗರದ ಮನೆ, ಹಾವೇರಿಯ ಕಚೇರಿ, ಜ್ಯೋತಿ ಶಿಗ್ಲಿ ಮನೆಯ ಮೇಲೆ ದಾಳಿ ನಡೆಸಿದ್ದು, ಅಪಾರ ಪ್ರಮಾಣದ ಆಸ್ತಿ ದಾಖಲೆ ವಶಪಡಿಸಿಕೊಂಡಿದ್ದಾರೆ.

ಹಾವೇರಿ ಲೋಕಾಯುಕ್ತ ಡಿವೈಎಸ್ಪಿ ಚಂದ್ರಶೇಖರ ಬಿ.ಪಿ. ನೇತೃತ್ವದಲ್ಲಿ ದಾವಣಗೆರೆ, ಶಿವಮೊಗ್ಗ, ಇತರ ಜಿಲ್ಲೆಗಳ ಅಧಿಕಾರಿಗಳ ತಂಡ ದಾಳಿ ನಡೆಸಿದೆ. ಪರಿಶೀಲನೆ ಮುಂದುವರಿದಿದೆ.