ಹಾವೇರಿ: ಎಫ್ ಎಸ್ ಎಲ್ ವರದಿಯನ್ನೇ ತಿರುಚಲು 5 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದ ವೈದ್ಯ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ.
ಹಾವೇರಿ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಗುರುರಾಜ ಭೀಮರಾಯ ಬಿರಾದಾರ ನ್ಯಾಯವೈದ್ಯ ಶಾಸ್ತ್ರ ವಿಭಾಗ ಸಹಾಯಕ ಪ್ರಾಧ್ಯಾಪಕ ಬಂಧಿತ ಆರೋಪಿ
ನಗರದ ಚಿರಾಯು ಆಸ್ಪತ್ರೆಯಲ್ಲಿ ಏಪ್ರಿಲ್ 29ರಂದು ವೈದ್ಯರ ನಿರ್ಲಕ್ಷ್ಯದಿಂದ ವಂದನಾ ತುಪ್ಪದ ಎಂಬ ಬಾಲಕಿ ಮೃತಪಟ್ಟಿದ್ದಳು ಎಂಬ ಆರೋಪ ಕೇಳಿ ಬಂದಿತ್ತು. ಘಟನೆ ಸಂಬಂಧ ಆಸ್ಪತ್ರೆ ವಿರುದ್ದ ದೂರು ದಾಖಲಾಗಿತ್ತು.
ಮೃತಬಾಲಕಿಯ ಮರಣೋತ್ತರ ಪರೀಕ್ಷೆ ಮಾಡಿದ್ದ ಡಾ.ಗುರುರಾಜ ಬಿರಾದಾರ
ಬಳಿಕ ಎಫ್ ಎಸ್ ಎಲ್ ವರದಿ ದೂರುದಾರ ಪರವಾಗಿ ಮಾಡಿಕೊಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದರು
ಇಂದು ಮುಂಗಡವಾಗಿ 3 ಲಕ್ಷ ರೂಪಾಯಿ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಅಧಿಕಾರಿಗಳ ದಾಳಿ ಮಾಡಿದ್ದಾರೆ.
ಚಿರಾಯು ಆಸ್ಪತ್ರೆಯಲ್ಲೇ ಲಂಚ ಸ್ವೀಕರಿಸಿತ್ತಿದ್ದ ವೈದ್ಯ ಗುರುರಾಜ ಬಿರಾದಾರ
ಲೋಕಾಯುಕ್ತ ಎಸ್ಪಿ ಎಂ.ಎಸ್. ಕೌಲಾಪುರೆ, ಡಿವೈಎಸ್ಪಿ ಮಧುಸೂದನ ನೇತೃತ್ವದಲ್ಲಿ ನಡೆದಿದೆ.
ಗುರುರಾಜ ಬಿರಾದಾರ ಮತ್ತು ಮತ್ತೋರ್ವ ಖಾಸಗಿ ವ್ಯಕ್ತಿ ಚನ್ನಬಸಯ್ಯ ಕುಲಕರ್ಣಿ ವಶಕ್ಕೆ ಪಡೆದಿರುವ ಲೋಕಾಯುಕ್ತ ಪೊಲೀಸರು.