ಹಾವೇರಿ: ತಾಲೂಕಿನ ಭೂಕೋಡಿಹಳ್ಳಿ ಗ್ರಾಮದ ಅನನ್ಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಆಯೋಜಿಸಿದ್ದ ಕುರುಬಗೊಂಡ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಮೌನೇಶ ಬಡಿಗೇರ ಉದ್ಘಾಟಿಸಿದರು.
ಸಿ.ಡಿ.ಹಾವೇರಿ ವಿದ್ಯಾ ಸಂಸ್ಥೆಯ ಅಧ್ಯಕ್ಷ ಮಲ್ಲಿಕಾರ್ಜುನ ಹಾವೇರಿ ಅಧ್ಯಕ್ಷತೆ ವಹಿಸಿದ್ದರು. ಶಿವಲೀಲಾ ಪಾಟೀಲ ಪ್ರತಿಭಾ ಕಾರಂಜಿಯ ಮಹತ್ವದ ಬಗ್ಗೆ ತಿಳಿಸಿದರು. ಕುರುಬಗೊಂಡ ಕ್ಲಸ್ಟರ್‌ನ 12 ಶಾಲೆಗಳಿಂದ 350 ಶಾಲಾ ಮಕ್ಕಳು ಭಾಗವಹಿಸಿದ್ದರು. ವಿಜೇತ ಮಕ್ಕಳಿಗೆ ಪ್ರಶಸ್ತಿ ಪತ್ರ ಹಾಗೂ ಬಹುಮಾನ ವಿತರಿಸಲಾಯಿತು.
ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಆರ್.ಜಿ.ಮೇಟಿ, ಶಿಕ್ಷಣ ಸಂಯೋಜಕ ಎಸ್.ಆರ್.ಹಿರೇಮಠ, ಸಿ.ಡಿ.ಹಾವೇರಿ ವಿದ್ಯಾಸಂಸ್ಥೆಯ ನಿರ್ದೇಶಕ ಆರ್.ಸಿ.ಹಿರೇಮಠ, ಎ.ಎ.ಕಾಕೋಳ, ಎಲ್.ಟಿ.ಕೆಂಚಣ್ಣನವರ, ಪೂರ್ಣಿಮಾ ಕ್ಯಾಲ್ಕೊಂಡ, ಜಗದೀಶ ಬಾರ್ಕಿ, ಇತರರಿದ್ದರು.