ಜಿಲ್ಲೆ

ಕಡಿಮೆ ವೆಚ್ಚದಲ್ಲಿ ಹೆಚ್ಚು ಮಾಹಿತಿ ನೀಡುವ ಮಿತ್ರ; ಕುಣಿಮೆಳ್ಳಿಹಳ್ಳಿಯಲ್ಲಿ ‘ವಿದ್ಯಾರ್ಥಿ ಮಿತ್ರ’ ಪತ್ರಿಕೆ ವಿತರಣೆ

ಕೇಶವಮೂರ್ತಿ ಬೇಲೂರಪ್ಪನವರ

ಹಾವೇರಿ: ಜ್ಞಾನವು ಎಲ್ಲದಕ್ಕಿಂತ ಮಿಗಿಲಾದದ್ದು. ಅತ್ಯಂತ ಕಡಿಮೆ ವೆಚ್ಚದಲ್ಲಿ ಅರ್ಥಪೂರ್ಣ ಹಾಗೂ ಹೆಚ್ಚು ಮಾಹಿತಿಯನ್ನು ವಿಜಯವಾಣಿ ವಿದ್ಯಾರ್ಥಿ ಮಿತ್ರ ಸಂಚಿಕೆಯಲ್ಲಿ ನೀಡುತ್ತಿರುವುದು ಪ್ರಶಂಸನೀಯ ಕಾರ್ಯ ಎಂದು ಕುಣಿಮೆಳ್ಳಿಹಳ್ಳಿ ಗ್ರಾಮದ ಸರ್ಕಾರಿ ಪದವಿಪೂರ್ವ ಕಾಲೇಜ್ ಪ್ರಾಂಶುಪಾಲೆ ಸುಜಾತಾ ಕೋಪರ್ಡೆ ಹೇಳಿದರು. ಸವಣೂರ ತಾಲೂಕಿನ ಕುಣಿಮೆಳ್ಳಿಹಳ್ಳಿ ಗ್ರಾಮದ ಸರ್ಕಾರಿ ಪದವಿಪೂರ್ವ ಕಾಲೇಜ್‌ನಲ್ಲಿ ಬುಧವಾರ ಆಯೋಜಿಸಿದ್ದ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ‘ವಿಜಯವಾಣಿ’ ‘ವಿದ್ಯಾರ್ಥಿ ಮಿತ್ರ’ ಪತ್ರಿಕೆ ವಿತರಿಸಿ ಅವರು ಮಾತನಾಡಿದರು. ಯಶಸ್ಸಿಗೆ ಬದ್ಧತೆ ಮುಖ್ಯವಾಗಿದ್ದು, ಈ ಬದ್ಧತೆಯನ್ನು ಜ್ಞಾನ ಸಂಪಾದನೆಯಲ್ಲಿ ತೋರಬೇಕಾದ ಅವಶ್ಯಕತೆ ಇದೆ ಎಂದರು. ಉಪನ್ಯಾಸಕರಾದ ಅರವಿಂದ ಐರಣಿ, ಸುರೇಶ ಸಾತೇನಹಳ್ಳಿ, ದಾದಾಪೀರ ಅಂಗಡಿ, ಚನ್ನಬಸನಗೌಡ ದೊಡ್ಡಗೌಡ್ರ, ಸಂತೋಷ ಮಾಳಗಿ, ವಿಜಯವಾಣಿ ಪತ್ರಿಕಾ ವಿತರಕ ಚಂದ್ರಶೇಖರ ಅಕ್ಕಿ, ವಿದ್ಯಾರ್ಥಿಗಳು, ಇದ್ದರು.