ಜಿಲ್ಲೆ

ಕೋಣನತಂಬಗಿ ಸಿದ್ಧಾರೂಢರ ತೆಪ್ಪೋತ್ಸವ ಇಂದು

ಕೇಶವಮೂರ್ತಿ ಬೇಲೂರಪ್ಪನವರ

ಹಾವೇರಿ: ವರದಾ ನದಿ ತಟದಲ್ಲಿರುವ ಸುಕ್ಷೇತ್ರ ತಾಲೂಕಿನ ಕೋಣನತಂಬಗಿ ಗ್ರಾಮದ ಶ್ರೀ ಜಗದ್ಗುರು ಸಿದ್ಧಾರೂಢರು ಮತ್ತು ಶ್ರೀ ಕಲ್ಮೇಶ್ವರ ದೇವರ ತೆಪ್ಪೋತ್ಸವ ಕಾರ್ಯಕ್ರಮ ಆ.31ರಂದು ನೂಲ ಹುಣ್ಣಿಮೆ ದಿನ ಜರುಗಲಿದೆ.
ವರದಾ ನದಿಯಲ್ಲಿ ತೆಪ್ಪೋತ್ಸವ ನಡೆಯುವುದು ಇಲ್ಲಿನ ವಿಶೇಷ. ತೆಪ್ಪೋತ್ಸವ ಅಂಗವಾಗಿ ಏಳು ದಿನಗಳಿಂದ ನಿರಂತರವಾಗಿ ಭಕ್ತರು ‘ಓಂ ನಮಃ ಶಿವಾಯ’ ಪಂಚಾಕ್ಷರಿ ಮಂತ್ರ ಭಜಿಸುತ್ತಿದ್ದಾರೆ. ಈ ವೇಳೆ ದೇವರಿಗೆ ವಿಶೇಷ ಅಭಿಷೇಕ, ಮತ್ತಿತರ ಕಾರ್ಯಕ್ರಮಗಳು ಜರುಗಲಿವೆ ಎಂದು ಡಾ.ಗಂಗಯ್ಯ ಕುಲಕರ್ಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.