ಜಿಲ್ಲೆ

ಕೆಎಲ್‌ಇ ಜಿಎಚ್ ಕಾಲೇಜ್‌ನಲ್ಲಿ ಸ್ವಚ್ಛತೆಯೇ ಸೇವೆ ಕಾರ್ಯಕ್ರಮ

ಹಾವೇರಿ: ಕೆಎಲ್‌ಇ ಜಿಎಚ್ ಕಾಲೇಜ್‌ನಲ್ಲಿ ಶುಕ್ರವಾರ ನೆಹರು ಯುವ ಕೇಂದ್ರ ಹಾಗೂ ಗುದ್ಲೆಪ್ಪ ಹಳ್ಳಿಕೇರಿ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ಸಹಯೋಗದಲ್ಲಿ ಸ್ವಚ್ಛತೆಯೇ ಸೇವೆ ಕಾರ್ಯಕ್ರಮ ನಡೆಯಿತು. ಎನ್‌ಎಸ್‌ಎಸ್ ಸ್ವಯಂಸೇವಕರು ಕಾಲೇಜ್ ಆವರಣ ಸ್ವಚ್ಛಗೊಳಿಸಿದರು. ನೆಹರು ಯುವ ಕೇಂದ್ರದ ಜಿಲ್ಲಾ ಯುವ ಅಧಿಕಾರಿ ಭುಕ್ಯಾ ಸಂಜೀವ, ಎನ್.ಎಸ್.ಎಸ್. ಅಧಿಕಾರಿ ಶಮಂತಕುಮಾರ ಕೆ.ಎಸ್., ಡಾ.ಶಿವಾನಂದ ಪಾಯಮಲ್ಲೆ, ಬಶೀರ್‌ಅಹ್ಮದ ಪಟೇಲ್, ಇತರರಿದ್ದರು.