ಹಾವೇರಿ: ಕರ್ನಾಟಕ ಕಿವುಡರ ಒಕ್ಕೂಟದ ವತಿಯಿಂದ ಉಡುಪಿಯಲ್ಲಿ ಇತ್ತೀಚೆಗೆ ಜರುಗಿದ ರಾಜ್ಯಮಟ್ಟದ ಕ್ರೀಡಾ ಸ್ಪರ್ಧೆಗಳಲ್ಲಿ ಹಾವೇರಿ ಜಿಲ್ಲಾ ಕಿವುಡ ಸಂಘದ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಜಯಭೇರಿ ಭಾರಿಸಿದ್ದಾರೆ. ರಾಣೆಬೆನ್ನೂರ ಮತ್ತು ಶಿಗ್ಗಾಂವಿ ಕಿವುಡ ಶಾಲೆಯ ಮಕ್ಕಳಾದ ಆದರ್ಶ 400 ಮೀಟರ್ ರನ್ನಿಂಗ್‌ನಲ್ಲಿ ಪ್ರಥಮ, ವಿಕಾಸ್ ಎನ್. 200 ಮೀ. ರನ್ನಿಂಗ್‌ನಲ್ಲಿ ದ್ವಿತೀಯ, ಸುನೀಲ- ಶಾಟ್‌ಫುಟ್‌ನಲ್ಲಿ ತೃತೀಯ, ನಾಗರಾಜ ಲಟ್ಟಣ್ಣನವರ- ಎತ್ತರ ಜಿಗಿತದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಇದೇ ಮೊದಲ ಬಾರಿಗೆ ಜಿಲ್ಲಾ ಕಿವುಡರ ಸಂಘದಿಂದ ಪಾಲ್ಗೊಂಡು ಗೆಲುವು ಸಾಧಿಸಿದ್ದಾರೆ ಎಂದು ಸಂಘದ ಅಧ್ಯಕ್ಷ ಉಮೇಶ ಕಳ್ಳಿಹಾಳ, ಗೌರವ ಕಾರ್ಯದರ್ಶಿ ವೀರಭದ್ರಪ್ಪ ಗೊಜನೂರ, ಸಹಾಯಕ ಕಾರ್ಯದರ್ಶಿ ಆನಂದ ತಿಳಿಸಿದ್ದಾರೆ.