ಹಾವೇರಿ: ಸುಕ್ಷೇತ್ರ ಕೆಂಗೊಂಡ ಶ್ರೀ ದುರ್ಗಾದೇವಿ ಜಾತ್ರೆ ಫೆ.6 ಮತ್ತು 7ರಂದು ಜರುಗಲಿದ್ದು, ಈ ಜಾತ್ರೆಗೆ ರಾಜ್ಯಾದ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಕ್ತಾಧಿಗಳು ಆಗಮಿಸುವ ಹಿನ್ನೆಲೆಯಲ್ಲಿ ಹೆಚ್ಚುವರಿ ಬಸ್ ಕಾರ್ಯಾಚರಣೆ ಮಾಡಲಾಗುತ್ತಿದೆ.
ಹಾವೇರಿ, ರಾಣೆಬೆನ್ನೂರ, ಗುತ್ತಲ, ಬ್ಯಾಡಗಿ ಹಾಗೂ ಹೊಸರಿತ್ತಿ ಬಸ್ ನಿಲ್ದಾಣಗಳಿಂದ ಕೆಂಗೊಂಡಕ್ಕೆ ಎರಡು ದಿನ ಹೆಚ್ಚುವರಿ ವಿಶೇಷ ಸಾರಿಗೆ ಬಸ್‌ಗಳು ಸಂಚರಿಸಲಿವೆ ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹಾವೇರಿ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಶಶಿಧರ ಮರಿದೇವರಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.