ಹಾವೇರಿ: ಕನ್ನಡ ನಾಗರೀಕತೆ ಮತ್ತು ಕನ್ನಡ ಸಂಸ್ಕೃತಿಯು ಜಗತ್ತಿನ ಶ್ರೇಷ್ಠ ಪರಂಪರೆಯಾಗಿದ್ದು, ಕನ್ನಡದ ನೆಲ, ಜಲ, ಬದುಕು, ಆಚಾರ ವಿಚಾರಗಳ ಸಮಗ್ರತೆಯೇ ಕನ್ನಡದ ಜೀವಸೆಲೆಯಾಗಿದೆ ಎಂದು ಶಿಕ್ಷಕಿ ರೂಪಾ ಸಜ್ಜನರ ಹೇಳಿದರು.
ನಗರದ ಗೆಳೆಯರ ಬಳಗದ ಲೋಡಾಯ ಸಭಾಂಗಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಜಿಲ್ಲಾ ಸರ್ಕಾರಿ ನೌಕರರ ಸಂಘದ ಸಹಯೋಗದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ 28ನೇ ನಾಡಹಬ್ಬ ಸಮಾರಂಭದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ರಾಜಪ್ರಭುತ್ವದಿಂದ ಪ್ರಜಾಪ್ರಭುತ್ವವರೆಗೆ ನಾಡಹಬ್ಬ ದಸರಾ ತನ್ನ ವಿಶಿಷ್ಟತೆಯನ್ನು ಕಾಯ್ದುಕೊಂಡಿದೆ. ಅಧ್ಯಾತ್ಮಿಕ ಹಿನ್ನೆಲೆಯ ಜತೆಗೆ ನಾಡೆನೆಲ್ಲೆಡೆ ಆಚರಿಸುವ ಈ ಹಬ್ಬವು ದೇಶದ ಆರ್ಥಿಕತೆಗೂ ದೊಡ್ಡ ಕೊಡುಗೆ ನೀಡಿದೆ ಎಂದರು.
ಸಾಮಾಜಿಕ ಕಾರ್ಯಕರ್ತ ಎಂ.ಎಸ್.ಕೋರಿಶೆಟ್ಟರ ಮಾತನಾಡಿ, ಮೈಸೂರು ದಸರಾದಲ್ಲಿ ಯುವ ದಸರಾ ಹೆಚ್ಚು ಆಕರ್ಷಣೀಯವಾಗಿದೆ. ಅದೇ ರೀತಿ ಸ್ಥಳೀಯ ನಾಡಹಬ್ಬದಲ್ಲೂ ಯುವ ಜನರನ್ನು ಸೆಳೆಯುವ ಕಾರ್ಯಕ್ರಮ ಆಯೋಜಿಸಬೇಕು ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಮಲ್ಲೇಶ ಕರಿಗಾರ ಮಾತನಾಡಿ, ನಾಡಹಬ್ಬದಂತಹ ಕಾರ್ಯಕ್ರಮಗಳು ಕನ್ನಡದ ಮೇಲಿನ ಅಭಿಮಾನವನ್ನು ಹೆಚ್ಚಿಸುತ್ತವೆ. ಹಬ್ಬಗಳು ನಾಡಿನ ಸಾಂಸ್ಕೃತಿಕ ಜೀವಂತಿಕೆಯ ಪ್ರತೀಕ ಆಗಿವೆ ಎಂದರು.
ಸಾನಿಧ್ಯ ವಹಿಸಿದ್ದ ಕರ್ಜಗಿ ಗೌರಿಮಠದ ಶ್ರೀ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ನಮ್ಮ ಸರ್ಕಾರ ಕನ್ನಡ ಸರ್ಕಾರ ಆಗಬೇಕು. ಕನ್ನಡ ನಾಡು ನುಡಿಯ ಬಗ್ಗೆ ಅಸಡ್ಡೆ ತೋರದೇ ಕನ್ನಡ ಬದುಕಿನ ಭಾಷೆಯಾಗಲು ಶ್ರಮಿಸಬೇಕು ಎಂದು ಹೇಳಿದರು.
ಸಮಾರಂಭದಲ್ಲಿ ನಾಡಹಬ್ಬ ಉತ್ಸವ ಸಮಿತಿಯ ಅಧ್ಯಕ್ಷ ನಿಜಲಿಂಗಪ್ಪ ಕಾಳೆ, ಕಸಾಪ ತಾಲೂಕು ಅಧ್ಯಕ್ಷ ವೈ.ಬಿ.ಆಲದಕಟ್ಟಿ, ವಿಜಯಕುಮಾರ ಮುದಕಣ್ಣನವರ, ದಾಕ್ಷಾಯಣಿ ಗಾಣಗೇರ, ಮೌನೇಶ ಚೂರಿ, ಎಸ್.ಎನ್.ದೊಡ್ಡಗೌಡರ, ಡಾ.ಗೀತಾ ಸುತ್ತಕೋಟಿ, ಹನುಮಂತಗೌಡ ಗೊಲ್ಲರ, ಮಮತಾ ನಂದೀಹಳ್ಳಿ, ನಾಗರಾಜ ಹುಡೇದ, ಅಕ್ಕಮ್ಮ ಹಾನಗಲ್ಲ, ಭಾರತಿ ಯಾವಗಲ್ಲ, ಸತೀಶ ಕುಲಕರ್ಣಿ, ಸಿ.ಎಸ್.ಮರಳಿಹಳ್ಳಿ, ಎಸ್.ಎಲ್.ಕಾಡದೇವರಮಠ, ವಿ.ಜಿ.ಯಳಗೇರಿ, ಶಂಕರ ಸುತಾರ, ಚಂದ್ರಪ್ಪ ಸನದಿ, ಶಿವಬಸಪ್ಪ ಮುದ್ದಿ, ಸತೀಶ ಎಂ.ಬಿ., ಮಾಲತೇಶ ಅಂಗೂರ, ಮತ್ತಿತರರು ಉಪಸ್ಥಿತರಿದ್ದರು.
ಪೃಥ್ವಿರಾಜ ಬೆಟಗೇರಿ ಸ್ವಾಗತಿಸಿದರು. ಶೋಭಾ ಜಾಗಟಗೇರಿ ಮತ್ತು ಶಶಿಕಲಾ ಅಕ್ಕಿ ನಿರೂಪಿಸಿದರು. ಶಿವಬಸವ ಮರಳಿಹಳ್ಳಿ ಸನ್ಮಾನಿತರ ಪರಿಚಯ ಮಾಡಿದರು. ಈರಣ್ಣ ಬೆಳವಡಿ ವಂದಿಸಿದರು.
ಹಲವರಿಗೆ ಸನ್ಮಾನ
ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಾದ ಡಾ.ಗುಹೇಶ್ವರ ಪಾಟೀಲ, ವೀರಣ್ಣ ಮಳಗಿ, ಶಂಭು ಕಳಸದ, ದಾದಾಪೀರ ನದಾಫ್, ಮಂಜಣ್ಣ ಗುಡಿ, ಶಿವಲೀಲಾ ವಾಣಿ, ನಿಸಾರಅಹ್ಮದ ಮುಳಗುಂದ, ರಾಜಶೇಖರ ಕುರುಬಗೊಂಡಶೆಟ್ಟರ ಅವರನ್ನು ಸನ್ಮಾನಿಸಲಾಯಿತು.