ಜಿಲ್ಲೆ

ಕನಕಾಪುರ ಯುಟಿಪಿ ಕಾಲುವೆ ದುರಸ್ತಿ ಮಾಡಿ; ಸಚಿವ ಶಿವಾನಂದ ಪಾಟೀಲಗೆ ರೈತ ಸಂಗದ ಮನವಿ

ಹಾವೇರಿ: ತಾಲೂಕಿನ ಕನಕಾಪುರ ಗ್ರಾಮದ ತುಂಗಾ ಮೇಲ್ದಂಡೆ ಯೋಜನೆ (ಯುಟಿಪಿ) ಕಾಲುವೆ ಡೆದು ಹಲವು ತಿಂಗಳು ಕಳೆದರೂ ಈವರೆಗೆ ದುರಸ್ಥಿ ಕಾರ್ಯ ಮಾಡಿಲ್ಲ. ಮಳೆಗಾಲದ ಒಳಗಾಗಿ ದುರಸ್ಥಿ ಮಾಡುವಂತೆ ಭೂಮಿಪುತ್ರ ರೈತ ಸಂಘ ಒತ್ತಾಯಿಸಿದೆ.

ಈ ಕುರಿತು ಸಂಘದ ಸದಸ್ಯರು ನಗರದಲ್ಲಿ ಸೋಮವಾರ ಸಚಿವ ಶಿವಾನಂದ ಪಾಟೀಲರಿಗೆ ಮನವಿ ಪತ್ರ ಸಲ್ಲಿಸಿದರು. ಅಕ್ಟೋಬರ್ 20, 2024ರಂದು ಭಾರೀ ಮಳೆಗೆ ಯುಟಿಪಿ ಕಾಲುವೆ ಒಡೆದು ನೂರಾರು ಎಕರೆ ಕೃಷಿ ಭೂಮಿ ಹಾನಿಗೀಡಾಗಿತ್ತು. ಮೆಕ್ಕೆಜೋಳ ಹತ್ತಿ, ಮೆಣಸಿನಕಾಯಿ, ತರಕಾರಿ, ಇತರ ಬೆಳೆ ನಷ್ಟಕ್ಕೆ ಒಳಗಾಗಿತ್ತು. ಆಗ ಡಿಸಿ, ಸಂಸದರು, ಕೃಷಿ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ದುರಸ್ಥಿ ಮಾಡುವ ಭರವಸೆ ನೀಡಿದ್ದರು. ಆದರೆ, ಆರು ತಿಂಗಳಾದರೂ ಈವರೆಗೆ ಸಣ್ಣ ಕಾರ್ಯವೂ ಆಗಿಲ್ಲ.

ಮುಂದಿನ ಮಳೆಗಾಲದಲ್ಲಿ ಹೆಚ್ಚಿನ ಮಳೆ ಆದರೆ, ಹೆಚ್ಚಿನ ಪ್ರಮಾಣದ ನೀರು ಹರಿದು ಬಂದರೆ ರೈತರಿಗೆ ಮತ್ತೆ ಸಂಕಷ್ಟ ಉಂಟಾಗುತ್ತದೆ. ಅಪಾರ ಪ್ರಮಾಣದ ಬೆಳೆ ಹಾಕಿಗೀಡಾಗುತ್ತದೆ. ಒಂದು ವಾರದೊಳಗೆ ಕಾಲುವೆ ದುರಸ್ಥಿ ಮಾಡಬೇಕು ಇಲ್ಲದಿದ್ದರೆ ಧರಣಿ ಸತ್ಯಾಗ್ರಹ ಆರಂಭಿಸಲಾಗುವುದು ಎಂದು ಮನವಿ ಪತ್ರದಲ್ಲಿ ಎಚ್ಚರಿಕೆ ನೀಡಿದ್ದಾರೆ.

ಈ ವೇಳೆ ಸಂಘದ ಎಫ್.ಎಸ್.ಗಾಜೀಗೌಡ್ರ, ಫಕ್ಕಿರೇಶ ಕಾಳಿ, ನೀಲಪ್ಪ ಹುಲಿಗೆಮ್ಮನವರ, ಫಕ್ಕೀರಪ್ಪ ಒಡೆಯಾಂಪುರ, ಶಿವಕುಮಾರ ತಳವಾರ, ಇತರರಿದ್ದರು.