ಜಿಲ್ಲೆ

ಕಬ್ಬೂರ ಸರ್ಕಾರಿ ಶಾಲೆಯಲ್ಲಿ ಕೈತೋಟ ಉದ್ಘಾಟನೆ

ಹಾವೇರಿ: ತಾಲೂಕಿನ ಕಬ್ಬೂರ ಗ್ರಾಮದ ಪಿ.ಎಂ.ಶ್ರೀ. ಕುವೆಂಪು ಶತಮಾನೋತ್ಸವ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಆವರಣದಲ್ಲಿ ಗುರುವಾರ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರುಚಿ ಬಿಂದಲ್ ಸಸಿ ನೆಡುವ ಮೂಲಕ ಶಾಲಾ ಕೈತೋಟಕ್ಕೆ ಚಾಲನೆ ನೀಡಿದರು. ಪೂರ್ವ ಪ್ರಾಥಮಿಕ ಶಾಲೆಗಳ ತರಗತಿಗಳನ್ನು ಉದ್ಘಾಟಿಸಿ, ಶಾಲಾ ಪರಿಸರದ ಪರಿಶೀಲನೆ ನಡೆಸಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಕರಬಸಪ್ಪ ಹೊಸಳ್ಳಿ, ಎಸ್‌ಡಿಎಂಸಿ ಅಧ್ಯಕ್ಷ ಶಿವಣ್ಣ ತೋಟದ, ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್ ಪಾಟೀಲ, ಕ್ಷೇತ್ರ ಸಮನ್ವಯ ಅಧಿಕಾರಿ ಮಹದೇವಪ್ಪ ಡಿ.ಎಂ., ಅಕ್ಷರ ದಾಸೋಹದ ಅಧಿಕಾರಿ ಜಗದೀಶ ಹಂಡೆಗಾರ, ಶಿಲ್ಪಾ ಉಜ್ಜಮ್ಮನವರ, ಬಸಣ್ಣ ದ್ಯಾವಣ್ಣವರ, ಗ್ರಾಮಸ್ಥರು, ಶಾಲೆಯ ಶಿಕ್ಷಕರು, ಸಿಬ್ಬಂದಿ ಇದ್ದರು.