ಹಾವೇರಿ: ನಗರಕ್ಕೆ ಬುಧವಾರ ಆಗಮಿಸಿದ ಜೈನ ಧರ್ಮದ ಆಚಾರ್ಯರಾದ ಆಚಾರ್ಯ ಶ್ರೀ 108 ಕುಂತು ಸಾಗರ ಮಹಾರಾಜರನ್ನು ನಗರದ ಜೈನ ಸಮುದಾಯದವರು ಆತ್ಮೀಯವಾಗಿ ಸನ್ಮಾನಿಸಿದರು.
ಮಹಿಳೆಯರು ಕುಂಭ ಹೊತ್ತು ಮೆರವಣಿಗೆ ಮೂಲಕ ವಿವಿಧ ವಾದ್ಯಗಳೊಂದಿಗೆ ಶ್ರೀಗಳನ್ನು ಸ್ವಾಗತಿಸಿದರು. ನಗರದ ಗಾಂಧಿ ವೃತ್ತದಲ್ಲಿ ಶ್ರೀಗಳ ಪಾದಪೂಜೆ ನೆರವೇರಿಸಿ ಪೂಜ್ಯರನ್ನು ಮೆರವಣಿಗೆ ಮೂಲಕ ಬಸ್ತಿ ಓಣಿಯಲ್ಲಿರುವ 1008ನೇಮಿನಾಥ ಜಿನಮಂದಿರಕ್ಕೆ ಕರೆತರಲಾಯಿತು. ಬಸ್ತಿಯಲ್ಲಿ 1008 ಆದಿನಾಥ ತೀರ್ಥಂಕರರಿಗೆ ಪೂಜ್ಯರ ನೇತೃದ್ವದಲ್ಲಿ ಪಂಚಾಮೃತ ಪೂಜೆ ನೆರವೇರಿಸಲಾಯಿತು. ನಂತರ ಆಚಾರ್ಯರಿಂದ ಪ್ರವಚನ ನೆರವೇರಿತು. ನಂತರ ಶ್ರವಣಬೆಳಗೊಳದ ಕಡೆಗೆ ಪಯಣ ಬೆಳೆಸಿದರು.
ಸನತಕುಮಾರ ಕಳಸೂರ, ವಜ್ರಕುಮಾರ, ಶ್ರೀ ನೇಮಿನಾಥ ಜಿನಮಂದಿರ ಕಮಿಟಿ ಅಧ್ಯಕ್ಷರು ಹಾಗೂ ಸದಸ್ಯರು, ರತ್ನತ್ರಯ ಮಹಿಳಾ ಮಂಡಳಿ ಅಧ್ಯಕ್ಷರು ಹಾಗೂ ಸದಸ್ಯರು, ಶ್ವೇತಾಂಬರ ಸಮಾಜದ ಸದಸ್ಯರು ಹಾಗೂ ಜೈನ ಸಮಾಜದವರು, ಪಾಲ್ಗೊಂಡಿದ್ದರು.