ಜಿಲ್ಲೆ

ಮನೆ ಹಿಂದಿನ ಬಾಗಿಲು ಮುರಿದು 8.45 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳ್ಳತನ

Haveri - Kariyappa Aralikatti

ಹಾವೇರಿ: ಮನೆಯ ಹಿಂದಿನ ಬಾಗಿಲು ಮುರಿದ ಕಳ್ಳರು ಬರೋಬ್ಬರಿ 8.45 ಲಕ್ಷ ರೂ. ಮೌಲ್ಯದ ಚಿನ್ನಾಭರಣ ದೋಚಿದ ಘಟನೆ ಇಲ್ಲಿಯ ಕಲ್ಲುಮಂಟಪ ಓಣಿಯಲ್ಲಿ ಮಂಗಳವಾರ ಸಂಭವಿಸಿದೆ.
ಜುಂಜಪ್ಪ ಹನುಮಂತಪ್ಪ ಮಡಿವಾಳರ (50) ಎಂಬುವರ ಮನೆ ಕಳ್ಳತನವಾಗಿರುವುದು.
ಇವರು ಮನೆಯಲ್ಲಿ ಇಲ್ಲದ ಸಮಯದಲ್ಲಿ ಮನೆ ಹಿಂದಿನ ಬಾಗಿಲು ಮುರಿದು ಒಳಗೆ ಬಂದ ಖದೀಮರು ಟೆಜೂರಿ ಲಾಕರನ್ನು ತೆಗೆದು 197 ಗ್ರಾಂ ಚಿನ್ನಾಭರಣ, 140 ಗ್ರಾಂ ಬೆಳ್ಳಿಯ ಆಭರಣ ದೋಚಿದ್ದಾರೆ. ಈ ಕುರಿತು ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.