ಹಾವೇರಿ: ಬೆಂಗಳೂರಿನ ವಾರ್ತಾ ಇಲಾಖೆಯಲ್ಲಿ ಬುಧವಾರ ಆಯೋಜಿಸಿದ್ದ ಗಾಂಧಿ ಜಯಂತಿ ಸಮಾರಂಭದಲ್ಲಿ ಹಾವೇರಿ ಜಿಲ್ಲೆಯ ಹೊಸರಿತ್ತಿ ಗ್ರಾಮದ ಗುದ್ಲೆಪ್ಪ ಹಳ್ಳಿಕೇರಿ ಸ್ಮಾರಕ ಪ್ರತಿಷ್ಠಾನದ ಗಾಂಧಿ ಗ್ರಾಮೀಣ ಗುರುಕುಲ ವಸತಿ ಶಾಲೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ 2024 ನೀಡಿ ಗೌರವಿಸಿದರು. ಗಾಂಧಿ ಗುರುಕುಲ ಪ್ರತಿಷ್ಠಾನದ ಟ್ರಸ್ಟಿ ಡಾ.ಗುದ್ಲೇಶ ಹಳ್ಳಿಕೇರಿ ಪ್ರಶಸ್ತಿ ಸ್ವೀಕರಿಸಿದರು. ರಿಜ್ವಾನ್ ಅರ್ಷದ್, ಶಾಲಿನಿ ರಜನೀಶ, ಡಾ.ಕೆ.ವಿ.ತ್ರಿಲೋಕಚಂದ್ರ, ಸಾಧುಕೋಕಿಲ, ದಯಾನಂದ ಕಲಕೋಟಿ, ಇತರರಿದ್ದರು.