ಹಾವೇರಿ: ನಗರದ ಗುತ್ತಲ ರಸ್ತೆ ಉಳವಿ ಚನ್ನಬಸವೇಶ್ವರ ನಗರ, ಪುರಸಿದ್ದೇಶ್ವರ ದೇವಸ್ಥಾನ ಹತ್ತಿರ ಬೆಂಗಳೂರಿನ ಏಕತಾ ಫೌಂಡೇಶನ್ ವತಿಯಿಂದ ಹಾಗೂ ಉತ್ತರ ಪ್ರದೇಶದ ಬ್ರೇನ್ ಬನಿ ಇಂಟರ್ ನ್ಯಾಷನಲ್ ಸ್ಕೂಲ್ನ ಸಹಯೋಗದಲ್ಲಿ ಹಿತ್ತಲಮನಿ ಗುರುಕುಲಮ್ ಶಿಶುವಿಹಾರ ಮತ್ತು ಪೂರ್ವ ಪ್ರಾಥಮಿಕ ಶಾಲೆ ನೂತನವಾಗಿ ಪ್ರಾರಂಭವಾಗಿದ್ದು, ಈ ಶಾಲೆಯಲ್ಲಿ ತಂದೆ- ತಾಯಿ ಇಲ್ಲದ ಅನಾಥ ಮಕ್ಕಳಿಗೆ ಉಚಿತ ಪ್ರವೇಶ ನೀಡಲಾಗುವುದು.
ಸಂಸ್ಥೆ ಅತ್ಯಾಧುನಿಕ ತಂತ್ರಜ್ಞಾನ ಸೌಲಭ್ಯಗಳೊಂದಿಗೆ ಮಕ್ಕಳಿಗೆ ಕಲಿಕೆಯೊಂದಿಗೆ ಸೃಜನಶೀಲ ಜೀವನಕೌಶಲಗಳ ಬೋಧನೆ ಮಾಡುತ್ತದೆ. ಸಂಸ್ಥೆಯು ಅರ್ಹ ಹಾಗೂ ನುರಿತ ಶಿಕ್ಷಕರೊಂದಿಗೆ ನಾವಿನ್ಯ ಶೈಕ್ಷಣಿಕ ಸಾಮಗ್ರಿಗಳು, ಸಮವಸ್ತ್ರ, ಮಕ್ಕಳಿಗೆ ಮೊಬೈಲ್ ಆ್ಯಪ್ ಮೂಲಕ ಬೋಧನೆ, ಪಾಲಕರಿಗೆ ಮಾಹಿತಿ, ಕ್ರೀಡಾಂಗಣ, ಪ್ರತಿಭಾ ಪುರಸ್ಕಾರ, ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳೊಂದಿಗೆ ಡಿಜಿಟಲ್ ಶಿಕ್ಷಣ ಸೇರಿ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿದೆ. ನಿಮ್ಮ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಆಸಕ್ತ ಪಾಲಕರು ಶಾಲೆಗೆ ಬೇಟಿ ನೀಡಿ ಪರಿಶೀಲಿಸಿ, ಪ್ರವೇಶಾತಿ ಪಡೆಯಬಹುದು. ಪ್ರತಿ ತರಗತಿಗೆ ಕೇವಲ 30 ಸೀಟುಗಳು ಮಾತ್ರ ಲಭ್ಯವಿದೆ ಎಂದು ಪ್ರಾಂಶುಪಾಲರು ತಿಳಿಸಿದ್ದಾರೆ.
ಕೋಟ್:
ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಮಗ್ರಿಗಳು, ಸಮವಸ್ತ್ರ, ಏಪ್ರಾನ್, ಮದ್ಯಾಹ್ನ ಊಟದ ವ್ಯವಸ್ಥೆ ಹಾಗೂ ಆಟದ ಮೈದಾನದೊಂದಿಗೆ, ಡಿಜಿಟಲ್ ಶಿಕ್ಷಣ ನೀಡಲಾಗುವುದು.
- ಪೂಜಾ ವಿರೇಶ ಹಿತ್ತಲಮನಿ, ಪ್ರಾಂಶುಪಾಲೆ, ಹಿತ್ತಲಮನಿ ಗುರುಕುಲಮ್, ಹಾವೇರಿ