ಜಿಲ್ಲೆ

ಹಾವೇರಿ, ಸುತ್ತಮುತ್ತ ಡಿ.29ರಂದು ವಿದ್ಯುತ್ ವ್ಯತ್ಯಯ

ಕೇಶವಮೂರ್ತಿ ಬೇಲೂರಪ್ಪನವರ

ಹಾವೇರಿ: ಹಾವೇರಿ 110 ಕೆ.ವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಡಿ.29ರಂದು ತುರ್ತು ನಿರ್ವಹಣಾ ಕಾಮಗಾರಿ ಇರುವುದರಿಂದ, 110 ಕೆವಿ ಹಾವೇರಿ, 33 ಕೆ.ವಿ ಕೆರಿಮತ್ತಿಹಳ್ಳಿ ಹಾಗೂ 33 ಕೆ.ವಿ ಗಾಂಧೀಪುರ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಎಲ್ಲ 11 ಕೆವಿ ಫೀಡರ್‌ಗಳಲ್ಲಿ ಬೆಳಗ್ಗೆ 10ರಿಂದ ಸಂಜೆ 5.30ರವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

ಆದ್ದರಿಂದ ಈ ವಿದ್ಯುತ್ ವಿತರಣಾ ಕೇಂದ್ರ ವ್ಯಾಪ್ತಿಗೆ ಬರುವ ಸಂಪೂರ್ಣ ಹಾವೇರಿ ನಗರ, ಆಲದಕಟ್ಟಿ, ಚಿಕ್ಕಲಿಂಗದಹಳ್ಳಿ, ದೇವಗಿರಿ, ಡಿ.ಸಿ.ಆಫೀಸ್, ದೇವಗಿರಿ ಯಲ್ಲಾಪುರ, ನಾಗನೂರ, ವರದಾಹಳ್ಳಿ, ಕೋಳೂರು, ಗಣಜೂರ, ಕರ್ಜಗಿ, ಯತ್ತಿನಹಳ್ಳಿ, ದೇವಿಹೊಸೂರ, ದಿಡಗೂರ, ಹಿರೇಲಿಂಗದಹಳ್ಳಿ, ನೆಲೋಗಲ್ಲ, ಹೊಂಬರಡಿ, ಹೊಸಳ್ಳಿ, ಕಬ್ಬೂರ, ಕಲ್ಲಾಪುರ, ಕನಕಾಪುರ, ಕೆರಿಮತ್ತಿಹಳ್ಳಿ, ತೋಟದಯಾಲ್ಲಾಪುರ, ವೀರಾಪುರ, ವೆಂಕಟಾಪುರ, ಗೌರಾಪುರ, ಎಸ್.ಪಿ. ಆಫೀಸ್, ಕುರುಬಗೊಂಡ ಹಾಗೂ ಸದರಿ ಫೀಡರ್ ವ್ಯಾಪ್ತಿಗೆ ಬರುವ ಎಲ್ಲ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸಬೇಕು ಎಂದು ಹೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.