ಜಿಲ್ಲೆ

ಡಿವೈಡರ್ ಮೇಲೆ ಹತ್ತಿ ಸಂಚರಿಸಿದ ಸಾರಿಗೆ ಬಸ್

ಹಾವೇರಿ: ನಗರದ ಹಾನಗಲ್ಲ ರಸ್ತೆಯ ಅಗ್ನಿಶಾಮಕ ಠಾಣೆ ಬಳಿ ಬುಧವಾರ ಸಾರಿಗೆ ಸಂಸ್ಥೆಯ ಬಸ್ ಒಂದು ಡಿವೈಡರ್ ಮೇಲೆ ಹತ್ತಿ ಸಂಚರಿಸಿತು. ಅದೃಷ್ಟವಶಾತ್ ಘಟನೆಯಲ್ಲಿ ಯಾರಿಗೂ ಅನಾಹುತ ಸಂಭವಿಸಿಲ್ಲ. ಈ ಕುರಿತು ಪ್ರಕರಣ ದಾಖಲಾಗಿಲ್ಲ ಎಂದು ಸಂಚಾರ ಠಾಣೆ ಪೊಲಿಸರು ತಿಳಿಸಿದ್ದಾರೆ.