ಜಿಲ್ಲೆ

ವಿಕಲಚೇತನರ ಉಚಿತ ತಪಾಸಣಾ ಶಿಬಿರ 10ರಿಂದ

ಕೇಶವಮೂರ್ತಿ ಬೇಲೂರಪ್ಪನವರ

ಹಾವೇರಿ: ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರ ಸಂಚಾರಿ ಪುನರ್ವಸತಿ ತಜ್ಞರ ತಂಡದಿಂದ ಫೆ.10ರಿಂದ 28ರವರೆಗೆ ಜಿಲ್ಲೆಯ ಆಯ್ದ ಗ್ರಾಮಗಳಲ್ಲಿ ವಿಕಲಚೇತನರಿಗೆ ಉಚಿತ ತಪಾಸಣೆ ಮತ್ತು ಅರಿವು ಮೂಡಿಸುವ ಶಿಬಿರ ಆಯೋಜಿಸಲಾಗಿದೆ. ಫೆ.10ರಂದು ಹಾವೇರಿ ತಾಲೂಕು ಕನಕಾಪೂರ, ಫೆ.11ರಂದು ಶಿಗ್ಗಾಂವಿ ತಾಲೂಕು ಅತ್ತಿಗೇರಿ, ಫೆ.12ರಂದು ಹಿರೇಕೆರೂರ ತಾಲೂಕು ಎಂ.ಕೆ.ಯತ್ತಿನಹಳ್ಳಿ, ಫೆ.19ರಂದು ಚಿಕ್ಕೇರೂರು, ಫೆ.13ರಂದು ಹಾನಗಲ್ಲ ತಾಲೂಕು ಸಮ್ಮಸಗಿ ಹಾಗೂ ಫೆ.18ರಂದು ಬೈಚವಳ್ಳಿ, ಫೆ.14ರಂದು ರಟ್ಟಿಹಳ್ಳಿ ತಾಲೂಕು ಇಂಗಳಗೊಂದಿ, ಫೆ.20ರಂದು ಕಡೂರು, ಫೆ.15ರಂದು ಸವಣೂರ ತಾಲೂಕು ಹಿರೇಮುಗದೂರ, ಫೆ.17ರಂದು ಬ್ಯಾಡಗಿ ತಾಲೂಕು ನೆಲ್ಲಿಕೊಪ್ಪ ಹಾಗೂ ಫೆ.27ರಂದು ದುಮ್ಮಿಹಾಳ, ಫೆ.25ರಂದು ಶಿಗ್ಗಾಂವಿ ತಾಲೂಕು ಬಸವನಾಳ, ಫೆ.28ರಂದು ರಾಣೆಬೆನ್ನೂರ ತಾಲೂಕು ಮಾಳನಾಯಕನಹಳ್ಳಿ ಗ್ರಾಮಗಳಲ್ಲಿ ಬೆಳಗ್ಗೆ 10.30ರಿಂದ ತಪಾಸಣಾ ಶಿಬಿರಗಳು ಜರುಗಲಿವೆ ಎಂದು ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಹಾಗೂ ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರದ ಗೌರವ ಕಾರ್ಯದರ್ಶಿ ಡಾ.ನೀಲೇಶ ಎಂ.ಎನ್. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.