ಜಿಲ್ಲೆ

ಗ್ರಂಥಾಲಯ ಮೇಲ್ವಿಚಾರಕರಿಗೆ ಕೌಶಲ ಕಾರ್ಯಾಗಾರ

ಕೇಶವಮೂರ್ತಿ ಬೇಲೂರಪ್ಪನವರ

ಹಾವೇರಿ: ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಗ್ರಾಪಂ ಗ್ರಂಥಾಲಯ ಹಾಗೂ ಅರಿವು ಕೇಂದ್ರದ ಮೇಲ್ವಿಚಾರಕರಿಗೆ ಕೌಶಲಾಭಿವೃದ್ಧಿ, ನಾಯಕತ್ವ ತರಬೇತಿ ಕಾರ್ಯಾಗಾರವನ್ನು ತಾಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನವೀನ ಕಟ್ಟಿಮನಿ ಉದ್ಘಾಟಿಸಿದರು.

ಹಾವೇರಿ, ಬ್ಯಾಡಗಿ ಹಾಗೂ ರಾಣೆಬೆನ್ನೂರ ತಾಲೂಕಿನ ಗ್ರಂಥಾಲಯ ಮೇಲ್ವಿಚಾರಕರು ಪಾಲ್ಗೊಂಡಿದ್ದರು. ಸಮಾರಂಭದಲ್ಲಿ ನಿವೃತ್ತಿ ಹೊಂದಿದ ನೆಗಳೂರು ಗ್ರಾಮ ಪಂಚಾಯಿತಿ ಅರಿವು ಕೇಂದ್ರದ ಮೇಲ್ವಿಚಾರಕ ದೇವೇಂದ್ರಪ್ಪ ಬಿಂಗಿ ಅವರನ್ನು ಸನ್ಮಾನಿಸಲಾಯಿತು.

ತಾಪಂ ಸಹಾಯಕ ಅಧಿಕಾರಿ ಸಂದೀಪ ಎಸ್.ಡಿ. ಹಾಗೂ ಎ.ಕೆ.ಚಂದ್ರು, ರವಿ ಪಾಟೀಲ, ರೇಖಾ ಉಪಳೆ, ಕೋಟೆಪ್ಪ ಕೆಂಗನಿಂಗಪ್ಪನವರ, ಮಲ್ಲಪ್ಪ ಕಮ್ಮಾರ, ಜಯಮ್ಮ ಸುಣಗಾರ, ಚಮನಸಾಬ ಮೆಳ್ಳೆಗಟ್ಟಿ, ಬಸಮ್ಮ ಬಿಂಗಿ, ಮಾಲತೇಶ ಹೆಬ್ಬಾರ, ಇತರರಿದ್ದರು. ರಾಮಪ್ಪ ಬಡಕರಿಯಪ್ಪನವರ ನಿರೂಪಿಸಿದರು.