ಜಿಲ್ಲೆ

ಹಾವೇರಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜ್‌ನಲ್ಲಿ ಚಿಗುರು ಕಾರ್ಯಕ್ರಮ ಅ.18ರಂದು

ಕೇಶವಮೂರ್ತಿ ಬೇಲೂರಪ್ಪನವರ

ಹಾವೇರಿ: ತಾಲೂಕಿನ ದೇವಗಿರಿ ಗ್ರಾಮದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜ್‌ನಲ್ಲಿ ಅ.18ರಂದು ಬೆಳಗ್ಗೆ 11 ಗಂಟೆಗೆ ಪ್ರಥಮ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಗಳನ್ನು ಸ್ವಾಗತಿಸುವ ಚಿಗುರು ಸಮಾರಂಭ ಹಮ್ಮಿಕೊಳ್ಳಲಾಗಿದೆ.

ಅತಿಥಿಗಳಾಗಿ ಬೆಂಗಳೂರಿನ ಇನ್‌ಸೈಟ್ಸ್ ಐಎಎಸ್ ತರಬೇತಿ ಸಂಸ್ಥೆ ಸಂಸ್ಥಾಪಕ ವಿನಯಕುಮಾರ ಜಿ.ಬಿ., ಹಾವೇರಿ ಜಿಲ್ಲೆಯ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಲ್.ವೈ.ಶಿರಕೋಳ, ಮತ್ತಿತರರು ಭಾಗವಹಿಸುವರು. ಪ್ರಾಂಶುಪಾಲ ಡಾ.ಮುನಿರಾಜು ಎಂ. ಸಮಾರಂಭದ ಅಧ್ಯಕ್ಷತೆ ವಹಿಸುವರು ಎಂದು ಕಾಲೇಜ್ ಪ್ರಕಟಣೆ ತಿಳಿಸಿದೆ.