ಹಾವೇರಿ: ಕಾಲ ಹರಣವಿಲ್ಲದೆ ಕನಸು ಕಟ್ಟಿಕೊಂಡು ವಿಜಯದ ದಾರಿಯಲ್ಲಿ ಆತ್ಮವಿಶ್ವಾಸದಿಂದ ಜಾಗೃತವಾಗಿ ನಡೆಯುವ ಪ್ರತಿಭಾವಂತನಿಗೆ ಗುರಿ ಮುಟ್ಟುವುದು ಸುಲಭ ಎಂದು ಸಾಹಿತಿ ಪ್ರೊ.ಮಾರುತಿ ಶಿಡ್ಲಾಪೂರ ತಿಳಿಸಿದರು.
ನಗರದ ಕೆ.ಎಲ್.ಇ. ಸಂಸ್ಥೆಯ ಗುದ್ಲೆಪ್ಪ ಹಳ್ಳಿಕೇರಿ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಭಾನುವಾರ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಹಾಗೂ ಪಿಯು ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ವಿಶ್ವಮಟ್ಟದ ಸ್ಪರ್ಧೆ ಎದುರಿಸಿ ಯುವಕರು ಮುನ್ನಡೆಯಬೇಕಾದ ಅನಿವಾರ್ಯತೆ ಇದೆ. ನಾಳೆಗಳ ಸುಂದರ ಬದುಕಿಗೆ ಇಂದಿನಿದಂದಲೇ ಪರಿಶ್ರಮ ಬೇಕು. ಬದುಕನ್ನು ಗೆಲ್ಲುತ್ತೇನೆ ಎಂಬ ನಂಬಿಕೆ ಇರಲಿ ಎಂದು ಕಿವಿಮಾತು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ.ಜಿ.ಆರ್ ಶಿಂಧೆ ಮಾತನಾಡಿ, ಒಬ್ಬರಿಗೊಬ್ಬರು ಗೌರವಿಸುವ ಸಂಸ್ಕೃತಿ ನಮ್ಮದು. ಇಲ್ಲಿರುವ ಒಳ್ಳೆಯದನ್ನೆಲ್ಲ ಪಡೆದುಕೊಳ್ಳುವ ಇಚ್ಛಾಶಕ್ತಿ ವಿದ್ಯಾರ್ಥಿಯಲ್ಲಿರಬೇಕು. ಕೀಳರಿಮೆ ಬಿಡಿ, ಓದಿನಲ್ಲಿ ಮಗ್ನರಾಗಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಪ್ರೊ.ಆರ್.ಎಸ್.ರಾಯ್ಕರ, ಪ್ರೊ.ಸಿ.ಎಫ್.ಬಾಳೇಶ್ವರಮಠ, ಎಂ.ಎಸ್.ಬೆಂಡೀಗೇರಿ, ಎಂ.ವಿ.ಸಾತೇನಹಳ್ಳಿ, ಅನಿತಾ ಉಗರಗೋಳ, ಬಿ.ಆರ್ ಪಾಟೀಲ, ಬಸವರಾಜ ಹೊಂಗಲ, ವಿಶ್ವ ಬಳಲಕೊಪ್ಪ, ಶಿವರಾಜ ಮಂಟೂರ, ಕಾವ್ಯ ತಿಳವಳ್ಳಿ, ವಿಜಯಲಕ್ಷ್ಮೀ ಮಲ್ಲನಗೌಡರ, ರೇಷ್ಮಾ ಕೋರಿಶೆಟ್ಟರ, ಗದಿಗಯ್ಯ ಹಿರೇಮಠ, ಪ್ರಶಾಂತ ಕೋರಿಶೆಟ್ಟರ, ನಾಗರಾಜ ಮುಚ್ಚಟ್ಟಿ, ಚೇತನಾ ಪರಪ್ಪನವರ, ಐಶ್ವರ್ಯ ಕೋಣನಹಳ್ಳಿ, ಉತ್ತಮ ಕಾಂತೆ, ಅಜಿತ ಚಡ್ಡಾ, ಜಿಲಾನಿ ದೊಡ್ಡಮನಿ, ರೂಪಾ ಹುನ್ನೂರ, ಮಲ್ಲಮ್ಮ ಉಳ್ಳಾಗಡ್ಡಿ, ಡಿ.ವೈ ಸುಜಾತಾ, ಅಕ್ಕಮ್ಮ ಅಮಾತಿ, ಪವಿತ್ರಾ ಕುರುಬರ, ಸಿದ್ದಮ್ಮ ಕುರ್ಲೆ, ಇತರರಿದ್ದರು.
ಸಮಷ್ಠಿ-ಧನ್ಯಾ ತಂಡ ಪ್ರಾರ್ಥಿಸಿತು. ಎನ್.ಎ. ಗಾಣಿಗಿ ಸ್ವಾಗತಿಸಿದರು. ಸಿದ್ದೇಶ್ವರ ಹುಣಸಿಕಟ್ಟಿಮಠ ಪರಿಚಯಿಸಿದರು. ಅವಿಕ್ಷಾರಶ್ಮಿ ಸವಣೂರ, ಪಿ.ಕೆ.ಬಸವರಾಜೇಶ್ವರಿ ನಿರೂಪಿಸಿದರು. ಗಿರೀಶ ಹೊಸಳ್ಳಿ ವಂದಿಸಿದರು.
ಪ್ರತಿಭಾ ಪುರಸ್ಕಾರ :
ನೀಟ್ ಪರೀಕ್ಷೆಯಲ್ಲಿ ಸಾಧನೆಗೈದ ಐಶ್ವರ್ಯ ತಳವಾರ, ದ್ವಿತೀಯ ಪಿಯುಸಿಯಲ್ಲಿ ಉನ್ನತ ಸಾಧನೆ ಮಾಡಿದ ಸಂತೋಷ ಡಿಳ್ಳೆಪ್ಪನವರ, ಧನುಶ್ರೀ ಬೆಟಗೇರಿ, ಅಮೃತಾ ಮುಲ್ಕಿ, ನಾಗರಾಜ ಹೊಟ್ಟೂರ, ಗೌಸಿಯಾಬಾನು ಧಾನೆಬಾಗ, ಸಹನಾ ನರೇಗಲ್ಲ, ರಕ್ಷಿತಾ ಹಬೀಬ, ಅಜಗರಲಿ ದುಕಾನದಾರ ಅವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.