ಹಾವೇರಿ: ಗಳಗನಾಥ ಮತ್ತು ನಾ.ರಾಜಪುರೋಹಿತ ಪ್ರತಿಷ್ಠಾನದ ವತಿಯಿಂದ ಕಾದಂಬರಿ ಪಿತಾಮಹ ಗಳಗನಾಥರ 155ನೇ ಜನ್ಮದಿನೋತ್ಸವ ಹಾಗೂ 2022-23ನೇ ಸಾಲಿನ ಗಳಗನಾಥ ಮತ್ತು ನಾ.ರಾಜಪುರೋಹಿತರ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಜ.5ರಂದು ಬೆಳಗ್ಗೆ 10.30ಕ್ಕೆ ಧಾರವಾಡ ಕನ್ನಡ ಕುಲಪುರೋಹಿತ ಆಲೂರು ವೆಂಕಟರಾವ್ ಸ್ಮಾರಕ ಭವನದಲ್ಲಿ ಆಯೋಜಿಸಲಾಗಿದೆ.
ನಿವೃತ್ತ ಪ್ರಾಧ್ಯಾಪಕ ಡಾ.ಶ್ರೀರಾಮ ಭಟ್ಟ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಹಿರಿಯ ಕವಿ ಪ್ರೊ.ಸಿದ್ದಲಿಂಗ ಪಟ್ಟಣಶೆಟ್ಟಿ, ನಾ.ರಾಜಪುರೋಹಿತ ಸಂಶೋಧಕ ಪ್ರಶಸ್ತಿ ಪುರಸ್ಕೃತ ಡಾ.ದೇವರಕೊಂಡಾರೆಡ್ಡಿ ಹಾಗೂ ಗಳಗನಾಥ ಕಾದಂಬರಿಕಾರ ಪ್ರಶಸ್ತಿ ಪುರಸ್ಕೃತ ಜಯಂತ ಗೌರೀಶ ಕಾಯ್ಕಿಣಿ ಪಾಲ್ಗೊಳ್ಳಲಿದ್ದಾರೆ. ನಿವೃತ್ತ ಪ್ರಾಧ್ಯಾಪಕ ಕೆ.ಆರ್.ಗಣೇಶ ಹಾಗೂ ಸಾಹಿತಿ ಶ್ರೀಧರ ಬಳಿಗಾರ, ಮತ್ತಿತರರು ಭಾಗವಹಿಸಲಿದ್ದಾರೆ. ಹಾವೇರಿ ಗಳಗನಾಥ ಮತ್ತು ನಾ.ರಾಜಪುರೋಹಿತ ಪ್ರತಿಷ್ಠಾನದ ಅಧ್ಯಕ್ಷ ಪ್ರೊ.ದುಷ್ಯಂತ ನಾಡಗೌಡ ಅಧ್ಯಕ್ಷತೆ ವಹಿಸಲಿದ್ದಾರೆ.