ಜಿಲ್ಲೆ

ಹೂವು ಹಾಗೂ ತ್ಯಾಜ್ಯವನ್ನು ರಸ್ತೆಯ ಮೇಲೆ ಸುರಿಯದೇ ಕಸದ ಡಬ್ಬಿಯಲ್ಲಿ ಸಂಗ್ರಹಿಸಿ; ಹಾವೇರಿ ನಗರಸಭೆ ಪೌರಾಯುಕ್ತ ಪರಶುರಾಮ ಚಲವಾದಿ

ಹಾವೇರಿ: ಪಿಬಿ ರಸ್ತೆಯ ಜಿಲ್ಲಾಸ್ಪತ್ರೆ ಎದುರಿನ ಹೂವಿನ ಮಾರುಕಟ್ಟೆ ವ್ಯಾಪಾರಿಗಳು, ಗ್ರಾಹಕರು ಉಳಿದ ಹೂವು ಹಾಗೂ ತ್ಯಾಜ್ಯವನ್ನು ರಸ್ತೆಯ ಮೇಲೆ ಸುರಿಯದೇ ಕಸದ ಡಬ್ಬಿಯಲ್ಲಿ ಸಂಗ್ರಹಿಸಿ ನಗರಸಭೆಯ ಕಸದ ಗಾಡಿಗೆ ಕೊಡುವಂತೆ ನಗರಸಭೆ ಪೌರಾಯುಕ್ತ ಪರಶುರಾಮ ಚಲವಾದಿ ವ್ಯಾಪಾರಿಗಳಿಗೆ ತಿಳಿವಳಿಕೆ ಪತ್ರ ನೀಡಿದರು. ಇದು ಕೊನೆಯ ಅವಕಾಶವಾಗಿದ್ದು, ಇನ್ನುಮುಂದೆ ರಸ್ತೆಗೆ ಹೂವು ಎಸೆದರೆ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಎಇಇ ಎನ್.ಆರ್.ರಾಯ್ಕರ, ಆರೋಗ್ಯ ನಿರೀಕ್ಷಕ ಗಿರೀಶ ಹರವಿ, ಇತರರಿದ್ದರು.