ಜಿಲ್ಲೆ

ಸೇನಾಪಡೆ, ಪೊಲೀಸರಿಂದ ಭಾರಿ ಭದ್ರತೆ; 3 ಸಾವಿರಕ್ಕೂ ಅಧಿಕ ಅಧಿಕಾರಿ, ಸಿಬ್ಬಂದಿ ಕಣ್ಗಾವಲು

Dharwad

ಹಾವೇರಿ: ಶಾಂತಿಯುತವಾಗಿ ಮತದಾನ ಪ್ರಕ್ರಿಯೆ ನಡೆಸುವ ಉದ್ದೇಶದಿಂದ ಜಿಲ್ಲಾ ಪೊಲೀಸರು ಜಿಲ್ಲೆಯಾದ್ಯಂತ ಭಾರಿ ಬಿಗಿ ಭದ್ರತೆ ಕೈಗೊಂಡಿದ್ದಾರೆ. 3 ಸಾವಿರಕ್ಕೂ ಅಧಿಕ ಸೇನಾ ಪಡೆ, ಪೊಲೀಸ್ ಅಧಿಕಾರಿ ಸಿಬ್ಬಂದಿ ಎಲ್ಲೆಡೆ ಸರ್ಪಗಾವಲು ಹಾಕಿದ್ದಾರೆ.
ಪ್ರತಿ ಮತಗಟ್ಟೆಗಳಿಗೂ ಸೂಕ್ತ ಸೇನಾಪಡೆ ಹಾಗೂ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಹೊರ ರಾಜ್ಯದ 16 ಸಿಎಪಿಎಫ್ ಕಂಪನಿಗಳಿಂದ 1,152 ಸಿಬ್ಬಂದಿ, 6 ಕೆಎಸ್‌ಆರ್‌ಪಿ ತುಕಡಿ, ಜಿಲ್ಲೆಯ 895 ಅಧಿಕಾರಿ, ಸಿಬ್ಬಂದಿ, ಮೈಸೂರು ಜಿಲ್ಲೆಯಿಂದ 361 ಸಿಬ್ಬಂದಿ, ಜಿಲ್ಲೆಯ 475 ಹಾಗೂ ಸೊಲ್ಲಾಪುರದ 200 ಗೃಹ ರಕ್ಷಕ ಸಿಬ್ಬಂದಿ ಸೇರಿದಂತೆ 3 ಸಾವಿರಕ್ಕೂ ಅಧಿಕ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ ಎಂದು ಎಸ್‌ಪಿ ಡಾ.ಶಿವಕುಮಾರ ಗುಣಾರೆ ‘ವಿಜಯವಾಣಿ’ಗೆ ತಿಳಿಸಿದ್ದಾರೆ.


ನಿಷೇಧಾಜ್ಞೆ, ಮದ್ಯ ನಿಷೇಧ
ಜಿಲ್ಲೆಯಾದ್ಯಂತ ಮೇ 8ರ ಸಂಜೆ 6 ಗಂಟೆಯಿಂದ ಮೇ 11ರ ಬೆಳಗ್ಗೆ 6 ಗಂಟೆವರೆಗೆ ಡ್ರೈ ಡೇ ಎಂದು ಘೋಷಿಸಲಾಗಿದೆ. ಮದ್ಯ ಮಾರಾಟ ಹಾಗೂ ಮದ್ಯಪಾನ ಸಂಪೂರ್ಣ ನಿಷೇಧಿಸಲಾಗಿದೆ. ಸಿ.ಆರ್.ಪಿ.ಎಸ್. 1973 ಕಲಂ 144 ಮೇರೆಗೆ ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಐದು ಜನಕ್ಕಿಂತ ಹೆಚ್ಚು ಜನ ಗುಂಪುಗೂಡುವ ಹಾಗಿಲ್ಲ ಎಂದು ಡಿಸಿ ಆದೇಶಿಸಿದ್ದಾರೆ.