ಜಿಲ್ಲೆ

ಡಿವೈಎಸ್‌ಪಿಗಳ ವರ್ಗಾವಣೆ

ಹಾವೇರಿ: ಜಿಲ್ಲೆಯ ಕೆಲ ಡಿವೈಎಸ್‌ಪಿ (ಸಿವಿಲ್) ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಸೋಮವಾರ ಆದೇಶ ಹೊರಡಿಸಿದೆ.
ಹಾವೇರಿ ಉಪ ವಿಭಾಗದ ಡಿವೈಎಸ್‌ಪಿ ಶಿವಾನಂದ ಚಲವಾದಿ ಬೆಂಗಳೂರಿನ ಹಲಸೂರ ಗೇಟ್ ಉಪ ವಿಭಾಗಕ್ಕೆ ವರ್ಗಾವಣೆಯಾಗಿದ್ದು, ಅವರ ಸ್ಥಾನಕ್ಕೆ ಹಾವೇರಿ ಡಿಸಿಆರ್‌ಬಿಯ ಡಿವೈಎಸ್‌ಪಿ ಮುತ್ತಪ್ಪ ಪಾಟೀಲ ವರ್ಗಾವಣೆಗೊಂಡಿದ್ದಾರೆ.
ರಾಣೆಬೆನ್ನೂರ ಉಪ ವಿಭಾಗದ ಡಿವೈಎಸ್‌ಪಿ ಶ್ರೀಧರ ಕೆ.ವಿ. ಬೆಂಗಳೂರಿನ ಬಿಎಂಟಿಎಫ್‌ಗೆ ವರ್ಗವಾಗಿದ್ದು, ಅವರ ಸ್ಥಾನಕ್ಕೆ ಹಾವೇರಿ ಗುಪ್ತವಾರ್ತೆಯಲ್ಲಿದ್ದ ಡಾ.ಗಿರೀಶ ಭೋಜಣ್ಣವರ, ಹಾವೇರಿ ಡಿಸಿಆರ್‌ಬಿಗೆ ಹುಬ್ಬಳ್ಳಿ-ಧಾರವಾಡ ಸಿಸಿಆರ್‌ಬಿಯಲ್ಲಿದ್ದ ಬಾಬಾಸಾಹೇಬ ಹುಲ್ಲಣ್ಣವರ ವರ್ಗಾವಣೆಗೊಂಡಿದ್ದಾರೆ.