ಹಾವೇರಿ: ದಸರಾ ಹಬ್ಬದ ಪ್ರಯುಕ್ತ ಹಾವೇರಿ ಗ್ರಾಮದೇವತೆ ದ್ಯಾಮವ್ವ ದೇವಿಯ ಬನ್ನಿ ಮುಡಿಯುವ ಕಾರ್ಯಕ್ರಮ ಹಾಗೂ ಪಲ್ಲಕ್ಕಿ ಉತ್ಸವ ಗುರುವಾರ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ದೇವಸ್ಥಾನ ತಲುಪಿತು. ದೇವಸ್ಥಾನ ಕಮಿಟಿ ಅಧ್ಯಕ್ಷ ಅಶೋಕ ಮುದಗಲ್ಲ, ಬೆಟ್ಟಪ್ಪ ಕುಳೆನೂರ, ಪ್ರದೀಪ ದೊಡ್ಡಗೌಡರ, ಮುರಗೇಶ ಬಾಲೇಹೊಸೂರ, ನಿಖಿಲ ದೊಗ್ಗಳ್ಳಿ, ರತನ ಕಾಶಪ್ಪನವರ, ರಮೇಶ ಚೌರದ, ಪ್ರಸನ್ನ ಗಚ್ಚಿನಮಠ, ಆಕಾಶ ಕುಳೇನೂರ, ರಾಘು ಕಾಂಬ್ಳೆ, ಹರೀಶ ನರಗುಂದ, ಶಿವರಾಜ ನವಲೆ, ರೇವಂತ ಬೆಟಗೇರಿ, ಬಾಳು ಜೈನ್, ಇತರರಿದ್ದರು.