ಜಿಲ್ಲೆ

ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟ ಸೆ.29, 30ರಂದು

ಹಾವೇರಿ: ಪ್ರಸಕ್ತ ಸಾಲಿನ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟ ಸೆ.29 ಹಾಗೂ ಸೆ.30ರಂದು ನಗರದ ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ.
ಸೆ.29ರಂದು ಪುರುಷರಿಗೆ ಅಥ್ಲೆಟಿಕ್ಸ್, ವಾಲಿಬಾಲ್, ಕಬಡ್ಡಿ, ಖೋಖೋ, ಟೇಬಲ್ ಟೆನ್ನಿಸ್, ಬಾಸ್ಕೆಟ್ ಬಾಲ್, ಯೋಗ ಹಾಗೂ ಮಹಿಳೆಯರಿಗೆ ಅಥ್ಲೆಟಿಕ್ಸ್, ವಾಲಿಬಾಲ್, ಕಬಡ್ಡಿ, ಖೋಖೋ, ಟೇಬಲ್ ಟೆನ್ನಿಸ್, ಬಾಸ್ಕೆಟ್ ಬಾಲ್ ಹಾಗೂ ಯೋಗ ಪಂದ್ಯಾವಳಿಗಳು ಜರುಗಲಿವೆ. ಸೆ.30ರಂದು ಮಹಿಳೆಯರಿಗೆ ಹಾಗೂ ಪುರುಷರಿಗೆ ಹ್ಯಾಂಡ್‌ಬಾಲ್ ಹಾಗೂ ಹಾಕಿ ಪಂದ್ಯಾವಳಿಗಳು ಜರುಗಲಿವೆ.
ರಾಜ್ಯ ಮಟ್ಟದದ ದೇಹದ್ಯಾರ್ಡ ಸ್ಪರ್ಧೆಯಲ್ಲಿ ಎತ್ತರ ಹಾಗೂ ತೂಕ ವಿಭಾಗ ಸ್ಪರ್ಧೆಯನ್ನು ಪ್ರತ್ಯೇಕವಾಗಿ ಹಾಗೂ ನೇರವಾಗಿ ಮೈಸೂರಿನಲ್ಲಿ ಸಂಘಟಿಸಲಾಗುವುದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.