ಹಾವೇರಿ: ಶಿಗ್ಗಾಂವಿಯ ದಿಶಾ ಇಂಟರ್ ನ್ಯಾಶನಲ್ ಸ್ಕೂಲ್ ವತಿಯಿಂದ ಕನ್ನಡದ ನಂಬರ್ ಒನ್ ದಿನಪತ್ರಿಕೆ ‘ವಿಜಯವಾಣಿ’ ಮಾಧ್ಯಮ ಸಹಯೋಗದಲ್ಲಿ ಜೂ.21ರಂದು ಬೆಳಗ್ಗೆ 9 ಗಂಟೆಗೆ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಹಮ್ಮಿಕೊಳ್ಳಲಾಗಿದೆ.
ವಿಶ್ವ ಯೋಗ ದಿನಾಚರಣೆ ಅಂಗವಾಗಿ ಪತ್ರಿಕೆ ಹಾಗೂ ಶಾಲೆಯ ಸಹಭಾಗಿತ್ವದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಸಮಾರಂಭದಲ್ಲಿ ಸಂಸ್ಥೆಯ ಅಧ್ಯಕ್ಷ ಸೋಮಣ್ಣ ಬೇವಿನಮರದ, ಕಾರ್ಯದರ್ಶಿ ರಾಘವೇಂದ್ರ ಬೇವಿನಮರದ, ಶಾಲಾ ಶೈಕ್ಷಣಿಕ ಉಸ್ತುವಾರಿಗಳಾದ ಶಶಾಂಕ ಕೌಜಲಗಿ, ಸಂತೋಷ ಹುಲಗೂರ, ಯೋಗ ತರಬೇತುದಾರೆ ರೇಖಾ ಪಾಟೀಲ, ಸಂತೋಷಿ ಮಾ, ಇತರರು ಪಾಲ್ಗೊಳ್ಳಲಿದ್ದಾರೆ.