ಜಿಲ್ಲೆ

ಪೋಸ್ಟ್ ಡಿಪ್ಲೊಮಾ ಇನ್ ಮೆಕೆಟ್ರಾನಿಕ್ಸ್ ಪ್ರವೇಶ ಪ್ರಾರಂಭ

ಕೇಶವಮೂರ್ತಿ ಬೇಲೂರಪ್ಪನವರ

ಹಾವೇರಿ: ಹುಬ್ಬಳ್ಳಿಯ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ (ಜಿಟಿಟಿಸಿ)ದಲ್ಲಿ ಪ್ರಸಕ್ತ ವರ್ಷದಿಂದ ಹೊಸದಾಗಿ ಒಂದು ವರ್ಷದ ಅವಧಿಯ ವೃತ್ತಿಪರ ಪೋಸ್ಟ್ ಡಿಪ್ಲೊಮಾ ಇನ್ ಮೆಕೆಟ್ರಾನಿಕ್ಸ್ ತರಬೇತಿ ಪ್ರಾರಂಭಿಸಲಾಗಿದ್ದು, ಅರ್ಹ ಅಭ್ಯರ್ಥಿಗಳಿಂದ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
ಮೆಕ್ಯಾನಿಕಲ್, ಅಟೊಮೊಬೈಲ್, ಎಲೆಕ್ಟ್ರಿಕಲ್, ಮೆಕೆಟ್ರಾನಿಕ್ಸ್, ಎಲೆಕ್ಟ್ರಾನಿಕ್ಸ್ ವಿಷಯಗಳಲ್ಲಿ ಡಿಪ್ಲೊಮಾ ಅಥವಾ ಇಂಜಿನಿಯರಿಂಗ್(ಬಿ.ಇ) ಉತ್ತೀರ್ಣರಾದ ಅಭ್ಯರ್ಥಿಗಳು ಈ ತರಬೇತಿ ಪಡೆಯಲು ಅರ್ಹರಿರುತ್ತಾರೆ. ಎಸ್.ಸಿ/ಎಸ್.ಟಿ. ಅಭ್ಯರ್ಥಿಗಳಿಗೆ ಸ್ಟೈಪೆಂಡ್ ಸಹಿತ ತರಬೇತಿ ನೀಡಲಾಗುವುದು.
ಒಂದು ವರ್ಷದ ಅವಧಿಯ ಈ ಕೋರ್ಸ್‌ನಲ್ಲಿ ಎಲೆಕ್ಟ್ರಿಕಲ್ ಇನ್‌ಸ್ಟಾಲೇಶನ್, ಎಲೆಕ್ಟ್ರಿಕಲ್ ಪ್ಯಾನೆಲ್‌ಡಿಸೈನ್, ಮೆಕ್ಯಾನಿಕಲ್ ಆಂಡ್ ಸಿಸ್ಟೆಮ್ ಡಿಸೈನ್, ಪಿಎಲ್‌ಸಿ, ಸ್ಕಾಡಾ, ಅಟೊಮೇಶನ್, ಸಿಎನ್‌ಸಿ ಮೈಂಟೇನನ್ಸ್, ಇಂಡಸ್ಟ್ರಿ 4.0 ಮತ್ತು ರೋಬೋಟಿಕ್ಸ್ ವಿಷಯಗಳಲ್ಲಿ ಪ್ರಾಯೋಗಿಕ ತರಬೇತಿ ನೀಡಲಾಗುತ್ತದೆ. ತರಬೇತಿಯ ಕೊನೆಯಲ್ಲಿ ಕ್ಯಾಂಪಸ್ ಸಂದರ್ಶನಗಳ ಮೂಲಕ ಪ್ರತಿಷ್ಠಿತ ಕೈಗಾರಿಕೆಗಳಲ್ಲಿ ಉದ್ಯೋಗಾವಕಾಶ ಕಲ್ಪಿಸಲಾಗುವುದು. ಜಿಟಿಟಿಸಿ ಸಂಸ್ಥೆಯು ಉನ್ನತ ತಂತ್ರಜ್ಞಾನ ಮತ್ತು ಮೂಲ ಸೌಕರ್ಯಗಳನ್ನು ಅಳವಡಿಸಿಕೊಂಡಿದ್ದು ವೃತ್ತಿಪರ ತರಬೇತಿಗಳಿಗೆ ಹೆಸರುವಾಸಿಯಾಗಿದೆ.
ಪೋಸ್ಟ್ ಡಿಪ್ಲೊಮಾ ಇನ್ ಮೆಕೆಟ್ರಾನಿಕ್ಸ್ ತರಬೇತಿಯು ಆಗಸ್ಟ್ 1ರಿಂದ ಪ್ರಾರಂಭವಾಗಲಿದೆ. ಆಸಕ್ತ ಅಭ್ಯರ್ಥಿಗಳು ಜು.28ರೊಳಗಾಗಿ ಪ್ರವೇಶ ಪಡೆದುಕೊಳ್ಳಲು ತಿಳಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಜಿಟಿಟಿಸಿ, ಇಂಡಸ್ಟ್ರಿಯಲ್ ಎಸ್ಟೇಟ್, ಗೋಕುಲ ರಸ್ತೆ, ಹುಬ್ಬಳ್ಳಿ ಇಲ್ಲಿಗೆ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.