ಜಿಲ್ಲೆ

ವರ್ಗಾವಣೆ ಮಾಹಿತಿ, ವೇಳಾ ಪಟ್ಟಿ ಪ್ರಕಟ

ಕೇಶವಮೂರ್ತಿ ಬೇಲೂರಪ್ಪನವರ

ಹಾವೇರಿ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಾರ್ವತ್ರಿಕ ವರ್ಗಾವಣೆ ಪರಿಶೀಲನೆ ಪ್ರಕ್ರಿಯೆ ಜೂ.27ರಿಂದ ಆರಂಭವಾಗಲಿದೆ.

ವರ್ಗಾವಣೆಗೆ ಸಂಬಂಧಿಸಿದಂತೆ ವಿವಿಧ ವೃಂದಗಳ ವರ್ಗಾವಣೆಗೆ ಅರ್ಹ ಅಧಿಕಾರಿ ಹಾಗೂ ನೌಕರರ ಅಂತಿಮ ಪಟ್ಟಿ, ಖಾಲಿ ಹುದ್ದೆಗಳ ಮಾಹಿತಿ ಹಾಗೂ ಸಮಾಲೋಚನಾ ವೇಳಾ ಪಟ್ಟಿಯನ್ನು ಇಲಾಖೆಯ ಅಂತರ್ಜಾಲದಲ್ಲಿ ಪ್ರಕಟಿಸಲಾಗಿದೆ.

ಜಿಲ್ಲೆಯ ಆರೋಗ್ಯ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗಾವಣೆ ಅಂತಿಮ ಪಟ್ಟಿಯಲ್ಲಿ ತಮ್ಮ ಹೆಸರನ್ನು ಪರಿಶೀಲಿಸಿಕೊಂಡು ತಮ್ಮ ಗುರುತಿನ ಚೀಟಿ ಹಾಗೂ ಇತ್ತಿಚಿನ ವೇತನ ಪ್ರಮಾಣ ಪತ್ರದೊಂದಿಗೆ ಹಾವೇರಿ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿಗೆ ಹಾಜರಾಗಲು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಶ ಸುರಗಿಹಳ್ಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.