ಜಿಲ್ಲೆ

ಅಪರಿಚಿತ ವ್ಯಕ್ತಿ ಶವವಾಗಿ ಪತ್ತೆ

ಕೇಶವಮೂರ್ತಿ ಬೇಲೂರಪ್ಪನವರ

ಹಾವೇರಿ: ಧಾರವಾಡ ರೈಲು ನಿಲ್ದಾಣದ ವೇದಿಕೆ 4ರಲ್ಲಿ ನಿಂತಿದ್ದ ರೈಲುಗಾಡಿ ಸಂಖ್ಯೆ 56903ರ ಕೋಚ್ ನಂ.124629ರಲ್ಲಿ 30ರಿಂದ 35 ವರ್ಷದ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದೆ.

ಮೃತ ವ್ಯಕ್ತಿಯ 5.2 ಅಡಿ ಎತ್ತರ, ಕೋಲುಮುಖ, ಗೋದಿಮೈಬಣ್ಣ ಹೊಂದಿದ್ದು, ಒಂದು ಕಪ್ಪು ನೀಲು ಬಿಳಿಬೂದು ಬಣ್ಣದ, ಫುಲ್ ಶರ್ಟ್, ಬೂದು ಬಣ್ಣದ ಪ್ಯಾಂಟ್, ಕಂದು ಬಣ್ಣದ ಸೊಂಟದ ಬೆಲ್ಟ್, ನೀಲಿ ಬಣ್ಣದ ಅಂಡರ್‌ವೇರ್ ಧರಿಸಿದ್ದಾನೆ. ಈ ವ್ಯಕ್ತಿಯ ವಾರಸುದಾರರು ಇದ್ದಲ್ಲಿ ಹುಬ್ಬಳ್ಳಿ ರೈಲ್ವೆ ಪೊಲೀಸ್ ಠಾಣೆ ದೂ.0836-2384751 ಅಥವಾ 9480802126 ಸಂಪರ್ಕಿಸಲು ಹುಬ್ಬಳ್ಳಿ ರೈಲ್ವೆ ಪೊಲೀಸ್ ಠಾಣೆ ಪೊಲೀಸ್ ಉಪ ನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.