ಹಾವೇರಿ: ದೇವರಗುಡ್ಡ-ರಾಣೆಬೆನ್ನೂರ ರೈಲು ನಿಲ್ದಾಣದ ನಡುವೆ ಅಂದಾಜು 50ರಿಂದ 55 ವರ್ಷದ ಅಪರಿಚಿತ ವ್ಯಕ್ತಿ ರೈಲುಗಾಡಿಗೆ ಸಿಲುಕಿ ಮೃತಪಟ್ಟಿದ್ದಾರೆ.
ಮೃತ ವ್ಯಕ್ತಿ 5.1 ಅಡಿ ಎತ್ತರ, ಗೋದಿ ಮೈಬಣ್ಣ, ದುಂಡು ಮುಖ ಹೊಂದಿದ್ದು, ಬಿಳಿ ಬಣ್ಣದ ನೆಹರು ರೆಡಿಮೇಡ್ ಶರ್ಟ್, ಹಸಿರು ಬಣ್ಣದ ಹಾಪ್ ಬನಿಯನ್, ಪಟ್ಟಾಪಟ್ಟಿ ಚಡ್ಡಿ, ಪಟ್ಟಾಪಟ್ಟಿ ಲುಂಗಿ ಹಾಗೂ ಒಂದು ಬಿಳಿ ಟವೆಲ್ ಧರಿಸಿದ್ದಾರೆ. ವಾರಸುದಾರರು ಯಾರಾದರೂ ಇದ್ದಲ್ಲಿ ಹುಬ್ಬಳ್ಳಿ ರೈಲ್ವೆ ಪೊಲೀಸ್ ಠಾಣೆ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.