ಜಿಲ್ಲೆ

ದೇವಗಿರಿ ಶ್ರೀ ಗಿರಿಮಲ್ಲಿಕಾರ್ಜುನ ಜಾತ್ರೆ ಫೆ.12ರಿಂದ 14ರವರೆಗೆ

ಹಾವೇರಿ: ತಾಲೂಕಿನ ದೇವಗಿರಿ ಗ್ರಾಮದ ಶ್ರೀ ಗಿರಿಮಲ್ಲಿಕಾರ್ಜುನ ದೇವರ ಜಾತ್ರಾ ಮಹೋತ್ಸವ ಫೆ.12ರಿಂದ 14ರವರೆಗೆ ವಿಜೃಂಭಣೆಯಿಂದ ಜರುಗಲಿದೆ.

ಫೆ.12ರಂದು ಕಂಕಣಧಾರಣ ಮತ್ತು ಹೂವಿನ ತೇರು, ಜರುಗಲಿದೆ. ಫೆ.13ರಂದು ಸಂಜೆ 4 ಗಂಟೆಗೆ ಶ್ರೀ ಗಿರಿಮಲ್ಲಿಕಾರ್ಜುನ ದೇವರ ಮಹಾರಥೋತ್ಸವ ವೀರಗಾಸೆ, ಡೊಳ್ಳು, ಭಾಜಾ ಭಜಂತ್ರಿಯೊಂದಿಗೆ ಭಕ್ತರ ಸಮ್ಮುಖದಲ್ಲಿ ಜರುಗಲಿದೆ. ಫೆ.14ರಂದು ಕಡುಬಿನ ಕಾಳಗ, ಬಂಡಿ ಓಕಳಿ ಜರುಗಲಿದೆ.

ಫೆ.13 ಹಾಗೂ 14ರಂದು ಎರಡು ದಿನ ಪ್ರಸಾದ ವ್ಯವಸ್ಥೆ ಇರುತ್ತದೆ. ದೇವಗಿರಿ, ಹಾವೇರಿ, ಅಕ್ಕಪಕ್ಕದ ಜಿಲ್ಲೆಗಳು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಜಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಶ್ರೀ ಗಿರಿಮಲ್ಲಿಕಾರ್ಜುನ ದೇವಸ್ಥಾನ ಸೇವಾ ಸಮಿತಿ ಪ್ರಕಟಣೆ ತಿಳಿಸಿದೆ.