ಜಿಲ್ಲೆ

ದೇವಗಿರಿ ದುರ್ಗಾದೇವಿ ಕಾರ್ತಿಕೋತ್ಸವ

ಕೇಶವಮೂರ್ತಿ ಬೇಲೂರಪ್ಪನವರ

ಹಾವೇರಿ: ತಾಲೂಕು ದೇವಗಿರಿ ಗ್ರಾಮದಲ್ಲಿ ಶ್ರೀ ದುರ್ಗಾದೇವಿ ಕಾರ್ತಿಕೋತ್ಸವದ ಅಂಗವಾಗಿ ಹನುಮನಹಳ್ಳಿ ಗ್ರಾಮದ ಜೀವನ ಜ್ಯೋತಿ ಜಾನಪದ ಸಿರಿನಾಡುನೃತ್ಯಕಲಾ ಸಂಸ್ಥೆ ಹಾಗೂ ಡಾ.ಪಂಡಿತ ಪುಟ್ಟರಾಜ ಸಂಗೀತ ವಿದ್ಯಾಲಯದ ವತಿಯಿಂದ ಇತ್ತೀಚೆಗೆ ಸಂಗೀತ, ರಸಮಂಜರಿ ಕಾರ್ಯಕ್ರಮ ಜರುಗಿತು.

ಬೆಳಗ್ಗೆ ದೇವಿಗೆ ಉಡಿ ತುಂಬುವ ಕಾರ್ಯಕ್ರಮ ಸಂಜೆ ದೇವಿಯ ಕಾರ್ತಿಕೋತ್ಸವ ಸಮಾರಂಭ ಅಪಾರ ಭಕ್ತರ ಸಮ್ಮುಖದಲ್ಲಿ ನಡೆಯಿತು. ಸಂಜೆ ಜಾನಪದ ಕಲಾವಿದ ಪರಮೇಶ್ವರ ಕಳಸಣ್ಣನವರ ನೇತೃತ್ವದಲ್ಲಿ ಸಂಗೀತ, ರಸಮಂಜರಿ ಕಾರ್ಯಕ್ರಮ ನಡೆಯಿತು. ಹಲವು ಕಲಾವಿದರು ಭಾಗವಹಿಸಿ ನೃತ್ಯ, ಗಾಯನದ ಮೂಲಕ ಜನರನ್ನು ರಂಜಿಸಿದರು.