ಜಿಲ್ಲೆ

ಗ್ರಾ.ಪಂ.ಗಳಿಗೆ ಆಡಳಿತಾಧಿಕಾರಿಗಳ ನೇಮಕ

ಹಾವೇರಿ: ಜಿಲ್ಲೆಯ ರಾಣೇಬೆನ್ನೂರ ತಾಲೂಕು ಹರನಗಿರಿ ಹಾಗೂ ಹಾವೇರಿ ತಾಲೂಕು ಬೆಳವಗಿ ಗ್ರಾಮ ಪಂಚಾಯಿತಿಗಳಿಗೆ ಆಡಳಿತಾಧಿಕಾರಿಗಳನ್ನು ನೇಮಕ ಮಾಡಿ ಜಿಲ್ಲಾಧಿಕಾರಿ ರಘುನಂದನ ಮೂರ್ತಿ ಆದೇಶ ಹೊರಡಿಸಿದ್ದಾರೆ.
ಹರನಗಿರಿ ಹಾಗೂ ಬೆಳವಗಿ ಗ್ರಾಮ ಪಂಚಾಯಿತಿಗಳಿಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ಚುನಾವಣೆ ನಡೆಯದ ಕಾರಣ ಸಾರ್ವಜನಿಕ ಆಡಳಿತಾತ್ಮಕ ಹಿತದೃಷ್ಟಿಯಿಂದ ಆಡಳಿತಾಧಿಕಾರಿಗಳನ್ನು ನೇಮಿಸಲಾಗಿದೆ. ಹರನಗಿರಿ ಗ್ರಾಮ ಪಂಚಾಯಿತಿಗೆ ರಾಣೇಬೆನ್ನೂರ ಗ್ರೇಡ್-1 ತಹಶೀಲ್ದಾರ್ ಹಾಗೂ ಬೆಳವಿಗಿ ಗ್ರಾಮ ಪಂಚಾಯಿತಿಗೆ ಹಾವೇರಿ ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಕ ವಿನಾಯಕ ಬೇವಿನಹಳ್ಳಿ ಅವರನ್ನು ಆಡಳಿತಾಧಿಕಾರಿಯನ್ನಾಗಿ ನೇಮಕ ಮಾಡಲಾಗಿದೆ.