ಜಿಲ್ಲೆ

ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಗೆ ಅಧಿಕಾರಿಗಳ ನೇಮಕ

ಕೇಶವಮೂರ್ತಿ ಬೇಲೂರಪ್ಪನವರ

ಹಾವೇರಿ: ಜಿಲ್ಲೆಯ ರಾಣೆಬೆನ್ನೂರ, ಬ್ಯಾಡಗಿ ಹಾಗೂ ಶಿಗ್ಗಾಂವಿ ತಾಲೂಕಿನ ವಿವಿಧ ಗ್ರಾಮ ಪಂಚಾಯಿತಿಗಳಿಗೆ ಎರಡನೇ ಅವಧಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆ ಜರುಗಿಸಲು ಅಧಿಕಾರಿಗಳನ್ನು ನೇಮಕ ಮಾಡಿ ಜಿಲ್ಲಾಧಿಕಾರಿ ರಘುನಂದನ ಮೂರ್ತಿ ಆದೇಶ ಹೊರಡಿಸಿದ್ದಾರೆ.
ರಾಣೆಬೆನ್ನೂರ ತಾಲೂಕು ಅಂತರವಳ್ಳಿ, ಕುಪ್ಪೇಲೂರ, ಮಾಳನಾಯಕನಹಳ್ಳಿ ಗ್ರಾಪಂಗಳಿಗೆ ರಾಣೇಬೆನ್ನೂರ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಸುಣಕಲ್ಲಬಿದರಿ, ತುಮ್ಮಿನಕಟ್ಟಿ ಹಾಗೂ ಜೋಯಿಸರಹರಳಳ್ಳಿ ಗ್ರಾಪಂಗಳಿಗೆ ರಾಣೆಬೆನ್ನೂರ ತಾಲೂಕು ಗ್ರೇಡ್ ತಹಶೀಲ್ದಾರ್ ಅವರನ್ನು ನೇಮಿಸಲಾಗಿದೆ.
ಬ್ಯಾಡಗಿ ತಾಲೂಕು ತಡಸ ಹಾಗೂ ಕಾಗಿನೆಲೆ ಗ್ರಾಪಂಗಳಿಗೆ ಬ್ಯಾಡಗಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಯನ್ನು ನೇಮಿಸಲಾಗಿದೆ. ಹಾನಗಲ್ಲ ತಾಲೂಕು ಹುಲ್ಲತ್ತಿ, ಹಾವಣಗಿ ಹಾಗೂ ಕೂಡಲ ಗ್ರಾಪಂಗಳಿಗೆ ಹಾನಗಲ್ಲ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಯನ್ನು ನೇಮಿಸಲಾಗಿದೆ. ಶಿಗ್ಗಾಂವಿ ತಾಲೂಕು ಹನುಮರಹಳ್ಳಿ ಗ್ರಾಪಂಗೆ ಶಿಗ್ಗಾಂವಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿಯನ್ನು ನೇಮಿಸಲಾಗಿದೆ.