ಹಾವೇರಿ: ಐತಿಹಾಸಿಕ ಮೈಸೂರು ದಸರಾ ಜಂಬೂ ಸವಾರಿ ಉತ್ಸವದಲ್ಲಿ ಜಿಲ್ಲೆಯ ಏಕೈಕ ತಂಡವಾಗಿ ಭಾಗವಹಿಸಿದ್ದ ಬಂಕಾಪುರದ ಓಂಪ್ರಕಾಶ ಅಂಗಡಿ ನೇತೃತ್ವದ ಶ್ರೀ ವೀರಭದ್ರೇಶ್ವರ ಪುರವಂತಿಕೆ ಕಲಾತಂಡ ತೃತೀಯ ಬಹುಮಾನ ಪಡೆದುಕೊಂಡಿದೆ.
ದಸರಾ ಜಂಬೂ ಸವಾರಿ ಮೆರವಣಿಗೆಯಲ್ಲಿ 137 ಕಲಾ ತಂಡಗಳು ಭಾಗವಹಿಸಿದ್ದವು. ಇದರಲ್ಲಿ ಪುರವಂತಿಕೆ ಕಲೆ ಪ್ರದರ್ಶಿಸಿದ ಬಂಕಾಪುರದ ತಂಡಕ್ಕೆ ತೃತೀಯ ಬಹುಮಾನ ದೊರೆತಿದೆ.
ಸಹ ಕಲಾವಿದರಾದ ಸಂಗಮೇಶ ಪರಿಶೆಟ್ಟಿ, ರೇವಣೆಪ್ಪ ಕಮ್ಮಾರ, ರುದ್ರೇಶ ಬೆಂಚಳ್ಳಿ, ಬಸವರಾಜ ಕಮ್ಮಾರ, ಗಂಗಾಧರ ಶೆಟ್ಟರರ್, ಸಿದ್ದಲಿಂಗೇಶ ಕುಂಬಾರಿ, ಗುರುನಂಜಪ್ಪ ಕುಂಬಾರಿ, ಕುಮಾರಸ್ವಾಮಿ ಮತ್ತಿಗಟ್ಟಿ, ನಾಗಪ್ಪ ಕುಂಬಾರ, ಸಂತೋಷ ಯತ್ನಳ್ಳಿ, ಸೂರಜ ಪಾಟೀಲ, ತಿಪ್ಪಣ್ಣ ಕುಂಬಾರ, ವಿನಾಯಕ ದೊಡ್ಮನಿ, ಸೋಮಶೇಖರ ಹುಗ್ಗೇರ, ರಘು ಹಿರೇಮಠ ಭಾಗವಹಿಸಿದ್ದರು.