ಹಾವೇರಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನ.19ರಂದು ಅಹಮದಾಬಾದ್‌ನಲ್ಲಿ ನಡೆಯಲಿರುವ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತ ಗೆಲುವು ಸಾಧಿಸಲಿ ಎಂದು ಕ್ರಿಕೆಟ್ ಅಭಿಮಾನಿಗಳು ನಗರದ ತೇರುಬೀದಿ ಆಂಜನೇಯ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ಭಾರತ ತಂಡ ಉತ್ತಮ ಪ್ರದರ್ಶನ ನೀಡಲಿ. ವಿಶ್ವಕಪ್ ಮುಡಿಗೇರಿಸಿಕೊಳ್ಳಲಿ ಎಂದು ತ್ರವರ್ಣ ಧ್ವಜ ಹಿಡಿದು ಆಂಜನೇಯನಿಗೆ ಪೂಜೆ ಸಲ್ಲಿಸಿ, ಪ್ರಾರ್ಥನೆಗೈದರು. ಭಾರತದ ಪರ ಘೋಷಣೆ ಕೂಗಿದರು. ಈ ಬಾರಿ ಕಪ್ ನಮ್ದೆ ಎಂದು ಜೈಕಾರ ಹಾಕಿದರು. ವಿರಾಟ್ ಕೊಹ್ಲಿ ಅಭಿಮಾನಿ ಪ್ರವೀಣ ಟಿ. ಎಂಬಾತ ಬೆನ್ನಿನ ಮೇಲೆ ಕೊಹ್ಲಿ ಭಾವಚಿತ್ರ ಅಚ್ಚೆ ಹಾಕಿಸಿಕೊಂಡು ಅಭಿಮಾನ ಮೆರೆದರು.
ಭಾರತೀಯ ಕ್ರಿಕೆಟ್ ಅಭಿಮಾನಿಗಳಾದ ಅಭಿಷೇಕ ಉಪ್ಪಿನ, ಗಣೇಶ ರಿತ್ತಿ, ನಿಖಿಲ ಹಿರೇಮಠ, ಸಂಕೇತ ಪಾಟೀಲ, ಪ್ರದೀಪ ತವರಿ, ಭುಜಬಲಿ ಕಳಸೂರ, ಪ್ರವೀಣ ತೋಡಕರ, ಸಂತೋಷ ನಂದಿ, ಇತರರಿದ್ದರು.