ಹಾವೇರಿ: ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಭಾವಚಿತ್ರವನ್ನು ತಿರುಚಿ ‘ಹೊಸ ಯುಗದ ರಾವಣ’ ಎಂಬ ಹೇಳಿಕೆಯೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ವಿವಾದಾತ್ಮಕ ಪೋಸ್ಟರ್ ಹರಿಬಿಟ್ಟಿರುವವರ ವಿರುದ್ಧ ನಗರದಲ್ಲಿ ಶನಿವಾರ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಪ್ರತಿಭಟಿಸಲಾಯಿತು.
ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ವಿವಾದಾತ್ಮಕ ಪೋಸ್ಟರ್ ಹರಿಬಿಟ್ಟವರ ವಿರುದ್ಧ ಕಿಡಿಕಾರಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಎಂ. ಮೈದೂರ ಮಾತನಾಡಿ, ಹೀನ ಮನಸ್ಥಿತಿಯ ಬಿಜೆಪಿಯವರು ಈ ಕೃತ್ಯ ಮಾಡಿದ್ದಾರೆ. ರಾಹುಲ್ ಗಾಂಧಿ ಅವರ ಜನಪ್ರಿಯತೆಯನ್ನು ನೋಡಿ ಕಂಗಲಾಗಿರುವ ಬಿಜೆಪಿ ನಾಯಕರು ಇಂತಹ ಹೀನ ಕೃತ್ಯಕ್ಕೆ ಕೈ ಹಾಕಿದ್ದಾರೆ. ಇದರಿಂದ ರಾಹುಲ್ ಗಾಂಧಿ ಅವರ ಜನಪ್ರಿಯತೆ ಕುಗ್ಗಿಸಲು ಸಾಧ್ಯವಿಲ್ಲ ಎಂದರು.
ಪ್ರತಿಭಟನೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪ್ರಭುಗೌಡ ಬಿಷ್ಟನಗೌಡ್ರ, ಎಂ.ಜೆ.ಮುಲ್ಲಾ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನ ಹಿರೇಮಠ, ಗಣೇಶ ಬಿಷ್ಟಣ್ಣನವರ, ರವಿ ಪುತ್ರನ್, ಬಸವರಾಜ ಬಳ್ಳಾರಿ, ಎಸ್.ಎಸ್.ಖಾಜಿ, ಜಾಫರ್ ಅತ್ತಾರ, ಉಮರ್ ಇನಾಮದಾರ, ಸಿ.ಎಸ್.ಲಕ್ಷ್ಮೇಶ್ವರಮಠ, ನವೀದ್ ವರ್ದಿ, ತೌಸೀಫ್ ದೊಡ್ಡಮನಿ, ರಫೀಕ್ ನದಾಫ್, ಉಮೀದ್ ನದಾಫ್, ಸಂತೋಷ ಹಲಗೇರಿ, ಸಂಜಯಗಾಂಧೀ ಸಂಜೀವಣ್ಣನವರ, ಪಕ್ಕೀರೇಶ ಹುರಳಿಕೊಪ್ಪಿ, ಚಂದ್ರು ಬೆನಕನಹಳ್ಳಿ, ಜಮೀರ್ ಜಿಗರಿ, ಮತ್ತಿತರರು ಪಾಲ್ಗೊಂಡಿದ್ದರು.