ಜಿಲ್ಲೆ

ಯುವಕನ ಅಪಹರಿಸಿ ಮಾರಣಾಂತಿಕವಾಗಿ ಹಲ್ಲೆ

ಕೇಶವಮೂರ್ತಿ ಬೇಲೂರಪ್ಪನವರ

ಹಾವೇರಿ: ಸ್ನೇಹಿತೆ ಜತೆಗೆ ಓಡಾಡುತ್ತಿದ್ದ ಯುವಕನ ಬಗ್ಗೆ ಅಪಾರ್ಥ ಮಾಡಿಕೊಂಡ ಯುವಕನೊಬ್ಬ ತನ್ನ ಐವರು ಸ್ನೇಹಿತರೊಂದಿಗೆ ಯುವಕನನ್ನು ಕಾರಿನಲ್ಲಿ ಅಪಹರಿಸಿ, ಮಾರಣಾಂತಿಕವಾಗಿ ಥಳಿಸಿದ ಘಟನೆ ನಗರದಲ್ಲಿ ನಡೆದಿದೆ.

ಚೇತನ ಅರಗೋಳ ಹಲ್ಲೆಗೀಡಾದವ. ಅರುಣ ಬಡ್ನಿ ಹಾಗೂ ಐವರು ಹಲ್ಲೆ ನಡೆಸಿದ ಆರೋಪಿಗಳು.

ಸವಣೂರ ತಾಲೂಕು ಮಂತ್ರೋಡಿ ಮೂಲದ, ನಗರದ ಖಾಸಗಿ ಕಾಲೇಜ್ ಒಂದರ ಬಿಕಾಂ ವಿದ್ಯಾರ್ಥಿ ಚೇತನ ತನ್ನ ಸ್ನೇಹಿತೆ ಜತೆಗೂಡಿ ನಿತ್ಯವೂ ಕಂಪ್ಯೂಟರ್ ಕ್ಲಾಸ್‌ಗೆ ಹೋಗುತ್ತಿದ್ದ. ಇದರಿಂದ ಕೆರಳಿದ ಅರುಣ ಲವ್ ಕೇಸ್ ಎಂದು ಭಾವಿಸಿ ಹಲ್ಲೆ ನಡೆಸಿದ್ದಾನೆ.

ಕಾರಿನಲ್ಲಿ ಚೇತನ್ ಅಪರಿಸಿಕೊಂಡು ಹೋಗಿ ದೇವಿಹೊಸೂರ ಕ್ರಾಸ್ ಬಳಿ ಕಟ್ಟಿಗೆ, ಕೋಲುಗಳಿಂದ ಮನಬಂದಂತೆ ಥಳಿಸಿದ್ದಾರೆ. ಇದರಿಂದ ಚೇತನ ತಲೆ, ಬೆನ್ನು, ಕೈಕಾಲಿಗೆ ಏಟು ಬಿದ್ದಿದೆ. ಚರ್ಮ ಸುಲಿಯುವಂತೆ ಥಳಿಸಿದ್ದಾರೆ ಎಂದು ಆರೋಪಿಸಿ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಚೇತನ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ನಾಲ್ವರನ್ನು ಬಂಧಿಸಿ, ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.